ವೈವಿಧ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ: ಬಿಇಒ ಎನ್.ಆರ್.ಹೆಗಡೆ

ಯಲ್ಲಾಪುರ: ಸೂಕ್ಮವಾದ ಜೀವ ವೈವಿಧ್ಯತೆಯನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಬಿಇಒ ಎನ್.ಆರ್.ಹೆಗಡೆ ಹೇಳಿದರು. ಬುಧವಾರ ಪಟ್ಟಣದ ಹೋಲಿ ರೋಜರಿ ಫ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಜೀವ ವೈವಿಧ್ಯತೆ ಕುರಿತಾದ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಮಾನವನ ದುರಾಸೆಯಿಂದ ಜೀವ ವೈವಿಧ್ಯತೆ ಹಾಳಾಗುತ್ತಿದೆ. ಜೀವವೈವಿಧ್ಯತೆ ಉಳಿಸಿಕೊಂಡು ಹೋಗುವಲ್ಲಿ ಇನ್ನಷ್ಟು ಜಾಗೃತಿ ಮೂಡಿಸಬೇಕು ಎಂದರು.

ಪ್ರೌಢಶಾಲಾ ಸಹಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಜೇಯ ನಾಯಕ, ತಾಲೂಕಾ ಅಧ್ಯಕ್ಷ ಚಂದ್ರಶೇಖರ ಎಸ್.ಸಿ, ಉಪ ಪ್ರಾದೇಶಿಕ ಕೇಂದ್ರದ ದೇಶಪಾಂಡೆ ಹಾಗೂ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.