ರಾಷ್ಟ್ರೀಯ ಗೇಮ್ಸ್’ಗೆ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿನಿ ಶಾಲಿನಿ ಸಿದ್ದಿ ಆಯ್ಕೆ

ಹಳಿಯಾಳ : ಅಕ್ಟೋಬರ್ 08 ರಂದು ಕರ್ನಾಟಕ ಕುಸ್ತಿ ಸಂಘದ ವತಿಯಿಂದ 37ನೇ ನ್ಯಾಷನಲ್ ಗೇಮ್ಸ್ ಗೋವಾ ಕುಸ್ತಿ ಕ್ರೀಡೆಯ ಪ್ರಯುಕ್ತ ಕರ್ನಾಟಕ ಕುಸ್ತಿ ತಂಡದ ಆಯ್ಕೆ ಪ್ರಕ್ರಿಯೆಯಲ್ಲಿ ಹಳಿಯಾಳ ಪಟ್ಟಣದ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿನಿ ಶಾಲಿನಿ ಸಿದ್ದಿ 57 ಕೆಜಿ ವಿಭಾಗದಲ್ಲಿ ದಿನಾಂಕ 29/ 10/ 2023 ರಿಂದ ದಿನಾಂಕ : 3/11/ 2023ರ ವರೆಗೆ ಗೋವಾ ರಾಜ್ಯದಲ್ಲಿ ನಡೆಯುವ ನ್ಯಾಷನಲ್ ಗೇಮ್ಸ್ ಗೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾಳೆ.

ಹಳಿಯಾಳ ಪಟ್ಟಣದ ಕ್ರೀಡಾ ವಸತಿ ಶಾಲೆಯ ತರಬೇತಿದಾರರಾದ ತುಕಾರಾಮ ಗೌಡ ಮತ್ತು ಶಿವಾನಂದ ಆರ್ ಅವರು ತರಬೇತಿಯನ್ನು ನೀಡುತ್ತಿರುವುದನ್ನು ಇಲ್ಲಿ ಸ್ನರಿಸಿಕೊಳ್ಳಬಹುದು.

ಈಕೆಯ ಸಾಧನೆಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ಅಜ್ಜಪ್ಪ ಸೊಗಲದ ಅವರು ಹಾಗೂ ತಾಲೂಕಿನ ಗಣ್ಯರಾನೇಕರು ಹರ್ಷವನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.