ಉಡುಪಿ, ಜು.22: ತಾಲೂಕಿನ ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಭವಾನಿ ಎಂಬ ಹೆಸರಿನ ಮನೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ ಮಾಡಿದ್ದರು. ಈ ವೇಳೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ 5 ಮಂದಿ ಯುವತಿಯರನ್ನು ರಕ್ಷಣೆ ಮಾಡಲಾಗಿದ್ದು, ಈ ದಂಧೆ ನಡೆಸುತ್ತಿದ್ದ ಅಬ್ದುಲ್ ಸಲಾಮತ್, ಚಂದ್ರಹಾಸ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ. ಇನ್ನು ರಕ್ಷಣೆ ಮಾಡಲ್ಪಟ್ಟ 3 ಜನ ಬೆಂಗಳೂರು ಮೂಲದವರಾಗಿದ್ದು, ಇನ್ನಿಬ್ಬರು ಮಹಾರಾಷ್ಟ್ರದ ನಾಸಿಕ್ ಹಾಗೂ ಮುಂಬೈ ವಾಸಿಗಳಾಗಿದ್ದಾರೆ. ಈ ದಂಧೆಗೆ ಬಳಸಿದ 4 ಮೊಬೈಲ್ ಫೋನ್, 1 ಕಾರು , 2 ಮೋಟಾರ್ ಸೈಕಲ್ ಹಾಗೂ 10 ಸಾವಿರ ರೂಪಾಯಿಯನ್ನು ಜಪ್ತಿ ಮಾಡಲಾಗಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.