ಕೊನೆಗೂ ಖೆಡ್ಡಾಗೆ ಬಿದ್ದ ಒಂಟಿಸಲಗ; ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ

ಚಾಮರಾಜನಗರ, ಜು.22: ಕಳೆದ ಎರಡು ವರ್ಷಗಳಿಂದ ರೈತರ ಪಾಲಿಗೆ ಬಿಟ್ಟು ಬಿಡದೆ ಕಾಡುತ್ತಿದ್ದ ಪುಂಡಾನೆ ಇದೀಗ ಅರಣ್ಯಾಧಿಕಾರಿಗಳ ಖೆಡ್ಡಾಗೆ ಬಿದ್ದಿದೆ. ಹೌದು ಈ ಕಾಡಾನೆಯನ್ನ ಬಂದಿಸಿದ್ದೆ ಬಲು ರೋಚಕವಾಗಿದೆ. ಕಳೆದ 2 ವರ್ಷಗಳಿಂದ ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯದ ರೈತರಿಗೆ ತಲೆ ನೋವಾಗಿದ್ದ ಈ ಒಂಟಿ ಸಲಗ, ಅಕ್ಕಿ ದಾಸ್ತಾನು ಗೋಧಾಮುಗಳಿಗೆ ನುಗ್ಗಿ ರೈತರು ಬೆಳೆದ ಅಕ್ಕಿ ತರಕಾರಿಗಳನ್ನ ತಿಂದು ತೇಗುತ್ತಿತ್ತು. ಈ ಹಿನ್ನಲೆ ಮೂರು ರಾಜ್ಯಗಳ ಅರಣ್ಯಾಧಿಕಾರಿಗಳು ಎಷ್ಟೇ ತಡಕಾಡಿದ್ರು, ಕೈಗೆ ಸಿಗದೆ ಎಸ್ಕೇಪ್ ಆಗುತ್ತಿತ್ತು. ಕಳೆದ ಒಂದು ತಿಂಗಳ ಹಿಂದೆ ಈ ಪುಂಡಾನೆಯನ್ನ ಬಂಡಿಪುರ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.

ಸತತ ಮೂರು ಅರವಳಿಕೆ ಮದ್ದು ನೀಡಿ ಸೆರೆ ಹಿಡಿಯಲಾಯಿತು

ಇನ್ನು ಕೂಂಬಿಂಗ್ ಕಿಂಗ್ ಜೆಪಿ ನೇತೃತ್ವದಲ್ಲಿ ಸತತ 6 ತಾಸುಗಳ ಸುದೀರ್ಘ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಸತತ ಮೂರು ಅರವಳಿಕೆ ಮದ್ದು ನೀಡಿ ಪುಂಡಾನೆಯನ್ನ ಸೆರೆ ಹಿಡಿಯಲಾಯಿತು. ಅದಕ್ಕೂ ಮುಂಚೆ ಈ ಒಂಟಿ ಸಲಗ ಕೂಂಬಿಂಗ್​ಗೆ ಕರೆದೊಯ್ಯಲಾಗಿದ್ದ ಆನೆಗಳ ಮೇಲೆ ರಿವರ್ಸ್ ಅಟ್ಯಾಕ್ ಮಾಡಿತ್ತು. ಈ ವೇಳೆ ಆನೆಯ ದಂತ ಮುರಿದು ಹೋಗಿ, ಬಳಿಕ ಎರಡು ಬಾರಿ ಅರವಳಿಕೆ ಮದ್ದು ನೀಡಲಾಯಿತು. ಆದರೂ, ಬಗ್ಗದ ಈ ಆನೆ ಮತ್ತೆ ದಾಳಿ ನಡೆಸಿತು.

ತರಭೇತಿ ಪಡೆದ ಮೂರು ಆನೆಗಳು ಏಕ ಕಾಲಕ್ಕೆ ದಾಳಿ ನಡೆಸಿ ಅರವಳಿಕೆ ಮದ್ದು ನೀಡಿದ ವೈದ್ಯರು

ಇನ್ನು ಈ ಒಂಟಿ ಸಲಗವನ್ನ ಸೆರೆ ಹಿಡಿಯಲು, ತರಭೇತಿ ಪಡೆದ ಮೂರು ಆನೆಗಳು ಏಕ ಕಾಲಕ್ಕೆ ದಾಳಿ ನಡೆಸಿ ಬಳಿಕ ವೈದ್ಯರು ಅರವಳಿಕೆ ಮದ್ದು ನೀಡಿದರು. ಸದ್ಯ ರಾಮಪುರ ಆನೆ ಬಿಡಾರದ ಬೃಹತ್ ಮರದ ದಿಂಬೆಯ ಖೆಡ್ಡಾದಲ್ಲಿ ಇತನನ್ನ ಬಂಧಿಸಲಾಗಿದೆ. ಈಗಲೂ ಕೂಡ ಈ ಪುಂಡಾನೆ ಬಂಧನದಿಂದ ಬಿಡಿಸಿಕೊಳ್ಳಲು ಯತ್ನಿಸುತ್ತಿದೆ. ಊಟ ನೀಡಲು ತೆರಳುವ ಕಾವಾಡಿ ಮಾವುತರ ಮೇಲೆ ಎಗರಿ ಬೀಳುತ್ತಿದೆ.

ಒಂಟಿ ಸಲಗಕ್ಕೆ ಟ್ರೈನಿಂಗ್ ನೀಡುತ್ತಿರುವ ಅರಣ್ಯಾಧಿಕಾರಿಗಳು

ನಿಧಾನವಾಗಿ ಸೆರೆಯಾದ ಈ ಒಂಟಿ ಸಲಗಕ್ಕೆ ಅರಣ್ಯಾಧಿಕಾರಿಗಳು ಟ್ರೈನಿಂಗ್ ನೀಡುತ್ತಿದ್ದಾರೆ. ಇನ್ನು 90 ದಿನಗಳ ಕಾಲ ಟ್ರೈ ಜಂಕ್ಷನ್ ಕಿಂಗ್​ ಎಂದೇ ಕರೆಯುವ ಈ ಆನೆಗೆ ಸೆರೆವಾಸದಲ್ಲಿಡಲಾಗಿದೆ. ಅಲ್ಲಿಯೇ ಇದಕ್ಕೆ ಅರಣ್ಯಾಧಿಕಾರಿಗಳು ತರಭೇತಿ ನೀಡಲಿದ್ದಾರೆ. ಇನ್ನು ಈ ಸಲಗಕ್ಕೆ ನಿಖರ ತರಭೇತಿ ನೀಡಿದ್ರೆ, ಅಭಿಮನ್ಯು ರೀತಿ ದಸರಾ ಜಂಬೂ ಸವಾರಿಗೆ ಸನ್ನದನಾಗಲಿದ್ದಾನೆ. ಹೌದು ಬೃಹತ್ ಸದೃಡ ದೇಹ ಅಜಾನು ಬಾಹುವಾಗಿರುವ ಈ ಸಲಗ ನೋಡುವುದಕ್ಕೆ ಬಲು ಸುಂದರವಾಗಿದೆ. ಸದ್ಯ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡಿಪುರದ ರಾಮಪುರ ಆನೆ ಬಿಡಾರದಲ್ಲಿ ತರಭೇತಿ ಕಾರ್ಯ ನಡೆಯುತ್ತಿದೆ.