ಮೆದುಳು ತಿನ್ನುವ ಅಮೀಬಾಗೆ ಮತ್ತೊಂದು ಬಲಿ; 2 ವರ್ಷದ ಮಗು ನಿಧನ

ಇತ್ತೀಚಿನ ದಿನಗಳಲ್ಲಿ ನೇಗ್ಲೇರಿಯಾ ಫೌಲೆರಿ ಎಂದು ಕರೆಯಲ್ಪಡುವ ‘ಮೆದುಳು ತಿನ್ನುವ ಅಮೀಬಾ’ ಸೋಂಕಿಗೆ ಒಳಗಾಗಿ ಸಾವನ್ನಪ್ಪುತ್ತಿರುವ ಪ್ರಕರಣಗಳು ಕಂಡುಬರುತ್ತಿದೆ. ಇತ್ತೀಚೆಗಷ್ಟೇ ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ 15 ವರ್ಷದ ಬಾಲಕ ಇದೇ ಸೋಂಕಿನಿಂದ ಮೃತಪಟ್ಟಿದ್ದು ವರದಿಯಾಗಿತ್ತು. ಇದೀಗಾ ಅಂತದ್ದೇ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಅಮೆರಿಕಾದ ನೆವಾಡಾದ ಎರಡು ವರ್ಷದ ಮಗು ಕೆಲವು ದಿನಗಳಿಂದ ವಿಪರಿತ ಜ್ವರದಿಂದ ಬಳಲುತ್ತಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗು ನೈಗ್ಲೇರಿಯಾ ಫೌಲೆರಿ ಸೋಂಕಿಗೆ ಒಳಗಾಗಿರುವುದು ಪರೀಕ್ಷೆಯ ವೇಳೆ ತಿಳಿದುಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಜುಲೈ 19 ರಂದು ಸಾವನ್ನಪ್ಪಿದ್ದು, ಅಘಾತಕಾರಿ ಘಟನೆಯನ್ನು ಮಗುವಿನ ತಾಯಿ ಸೋಶಿಯಲ್​​ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

ಮೆದುಳು ತಿನ್ನುವ ಅಮೀಬಾಗೆ ಬಲಿಯಾಗಿದ್ದು ಹೇಗೆ?

ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮಗು ನೀರಿನಲ್ಲಿ ಆಟವಾಡುತ್ತಿರುವಾಗ ಸೋಂಕು ಮೂಗು, ಬಾಯಿ ಅಥವಾ ಕಿವಿಗಳ ಮೂಲಕ ದೇಹವನ್ನು ಪ್ರವೇಶಿಸಿದೆ ಎಂದು ವರದಿಯಾಗಿದೆ.

ನೇಗ್ಲೇರಿಯಾ ಫೌಲೆರಿ ಎಂದರೇನು?

ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (ಸಿಡಿಸಿ) ಪ್ರಕಾರ, ನಾಗ್ಲೇರಿಯಾ ಫೌಲೆರಿ ಎಂಬುದು ನದಿ ಹಾಗೂ ಸರೋವರ ಸಿಹಿನೀರಿನಲ್ಲಿ ಕಂಡುಬರುವ ಅಮೀಬಾ. ಮೂಗಿನ ಮೂಲಕ ದೇಹವನ್ನು ಪ್ರವೇಶಿಸಿದಾಗ ಸೋಂಕು ಮೆದುಳಿನ ಮೇಲೆ ದಾಳಿ ಮಾಡಬಹುದು. ಅಪರೂಪವಾಗಿದ್ದರೂ, ಇದು ಮಾರಣಾಂತಿಕವಾಗಿದೆ. ಮೂಗು ಪ್ರವೇಶಿಸಿದಾಗ ಸೋಂಕಿಗೆ ಒಂದೊಂದೇ ರೋಗ ಲಕ್ಷಣಗಳು ಕಂಡುಬರುತ್ತದೆ.

ಮೆದುಳು ತಿನ್ನುವ ಅಮೀಬಾ ಸೋಂಕಿನ ಲಕ್ಷಣಗಳೇನು?

ಮೆದುಳನ್ನು ತಿನ್ನುವ ಅಮೀಬಾದ ಲಕ್ಷಣಗಳು 12 ದಿನಗಳ ನಂತರ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ರೋಗಲಕ್ಷಣಗಳು ಕಾಣಿಸಿಕೊಂಡ 18 ದಿನಗಳ ನಂತರ ರೋಗಿಯು ಸಾಯಬಹುದು.

ರೋಗಲಕ್ಷಣಗಳು ಹೀಗಿವೆ:

  • ಜ್ವರ
  • ವಾಕರಿಕೆ
  • ರೋಗಗ್ರಸ್ತವಾಗುವಿಕೆ
  • ತಲೆಯ ಮುಂಭಾಗದಲ್ಲಿ ನೋವು
  • ಕೋಮಾ

ಮೆದುಳು ತಿನ್ನುವ ಅಮೀಬಾ ಸೋಂಕಿಗೆ ಹೇಗೆ ಚಿಕಿತ್ಸೆ ?

ಸಿಡಿಸಿ ಪ್ರಕಾರ, ಈ ಅಪರೂಪದ ಸೋಂಕನ್ನು ಆಂಫೋಟೆರಿಸಿನ್ ಬಿ, ಅಜಿಥ್ರೊಮೈಸಿನ್, ಫ್ಲುಕೋನಜೋಲ್, ರಿಫಾಂಪಿನ್, ಮಿಲ್ಟೆಫೋಸಿನ್ ಮತ್ತು ಡೆಕ್ಸಾಮೆಥಾಸೊನ್ ಸೇರಿದಂತೆ ಔಷಧಿಗಳ ಸಂಯೋಜನೆಯೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಆದಾಗ್ಯೂ, ಹೆಚ್ಚಿನ ವರದಿಯಾದ ಸೋಂಕುಗಳು ಮಾರಣಾಂತಿಕವಾಗಿವೆ.