ಆನೇಕಲ್​​​ನಲ್ಲಿ ಹಾಡಹಗಲೇ ಗಾಂಜಾ ಮತ್ತಿನಲ್ಲಿ ಪುಡಿರೌಡಿಗಳ ಅಟ್ಟಹಾಸ; ಕಣ್ಮುಚ್ಚಿ ಕುಳಿತ ಪೋಲೀಸರು

ಆನೇಕಲ್: ಗಾಂಜಾ ಮತ್ತಿನಲ್ಲಿ ಪುಡಿ ರೌಡಿಗಳು ಹಾಡಹಗಲೇ ನಡುರಸ್ತೆಯಲ್ಲಿ ಲಾಂಗು ಮಚ್ಚು ಜಳಪಿಸಿ ಪುಂಡಾಟವಾಡಿರುವ ಘಟನೆ ಆನೇಕಲ್ ಪಟ್ಟಣದ ಹೊಸೂರು ಮುಖ್ಯರಸ್ತೆಯಲ್ಲಿ ನಡೆದಿದೆ. ಪುಡಿರೌಡಿಗಳು ರಸ್ತೆಯಲ್ಲಿ ಕೇಕೆ ಹಾಕಿ ಸಾರ್ವಜನಿಕರಿಗೆ ಭಯ ಹುಟ್ಟಿಸುತ್ತಿದ್ದಾರೆ. ಇವರು ಪೋಲೀಸರ ಭಯವಿಲ್ಲದೆ ರಸ್ತೆಯಲ್ಲಿ ಅಟ್ಟಹಾಸದಿಂದ ಮೆರೆಯುತ್ತಿದ್ದರೂ, ಆನೇಕಲ್ ಪೋಲೀಸರು ಕಣ್ಮುಚ್ಚಿ ಕುಳಿತಿದ್ದಾರೆ.