ಹಾಸನ (ಜು.6) : ಯುವಕರ ಗುಂಪೊಂದು ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿದ ಘಟನೆ ಹಾಸನ ಜಿಲ್ಲೆ ಆಲೂರಿನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ನಡೆದಿದೆ.
ಕೈಯಲ್ಲಿ ಕ್ರಿಕೆಟ್ ಬ್ಯಾಟ್, ವಿಕೆಟ್ ಹಾಗೂ ಪೀಠೋಪಕರಣಗಳಿಂದ ಥೇಟ್ ರೌಡಿಗಳು ವರ್ತಿಸುವಂತತೆ ವರ್ತಿಸಿದ್ದಾರೆ. ವಸತಿ ನಿಲಯದ ವಿದ್ಯಾರ್ಥಿಗಳ ಮೇಲೆ ಮನಬಂದಂತೆ ಹಲ್ಲೆ ಮಾಡಿರೋ ಗುಂಪು. ವಿದ್ಯಾರ್ಥಿಗಳು ಕೆಳಕ್ಕೆ ಬಿದ್ದರೂ ಕ್ರೂರವಾಗಿ ಹಲ್ಲೆ ಮಾಡಿರೋ ಪುಂಡರ ಗ್ಯಾಂಗ್.
ಈ ಘಟನೆಗೆ ಮೊದಲು ಕಾಲೇಜು ವಿದ್ಯಾರ್ಥಿಗಳೊಂದಿಗೆ ಗಲಾಟೆ ಮಾಡಿಕೊಮಡಿದ್ದಾರೆ. ಆಲೂರಿನ ಬಸ್ ನಿಲ್ದಾಣದ ಬಳಿ ಗಲಾಟೆ ಮಾಡಿಕೊಂಡಿರೋ ಗುಂಪು ಅಲ್ಲಿಯೂ ಹೊಡೆದಾಡಿಕೊಂಡಿದ್ದಾರೆ. ಬಳಿಕ ವಸತಿ ನಿಲಯದ ಹಾಸ್ಟೆಲ್ ನುಗ್ಗಿ ವಿದ್ಯಾರ್ಥಿಗಳಿಗೆ ಬ್ಯಾಟ್, ವಿಕೆಟ್ಗಳಿಂದ ಮನಬಂದಂಥೆ ಥಳಿಸಿದ್ದಾರೆ. ಅಷ್ಟಕ್ಕೂ ಆಲದೆ ವಿದ್ಯಾರ್ಥಿ ನಿಲಯದ ಪೀಠೋಪಕರಣಗಳನ್ನ ಒಡೆದುಹಾಕಿರುವ ಪುಂಡರು. ಸದ್ಯ ಹಲ್ಲೆಯಿಂದ ತೀವ್ರ ಗಾಯಗೊಂಡಿರುವ ವಿದ್ಯಾರ್ಥಿಳನ್ನು ಪಟ್ಟಣದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.