ಬೆಂಗಳೂರು: ಪೊಲೀಸ್ ಇಲಾಖೆಯಲ್ಲಿ ಕಾರ್ಯಕಾರ್ಯೇತರ ಹುದ್ದೆ ಆದೇಶ ಮಾರ್ಪಾಡು ಮಾಡಿ ಗೃಹ ಇಲಾಖೆ ಸಚಿವ ಡಾ.ಜಿ.ಪರಮೇಶ್ವರ್ರಿಂದ ಬುಧವಾರ ಆದೇಶ ಹೊರಡಿಸಲಾಗಿದೆ. ಬಡ್ತಿ ಪಡೆದ ಇನ್ಸ್ಪೆಕ್ಟರ್, ಡಿವೈಎಸ್ಪಿ ಕನಿಷ್ಠ 2 ವರ್ಷ ಮತ್ತು ಬಡ್ತಿ ಪಡೆದ ಅಧಿಕಾರಿಗಳು ನಾನ್ ಎಕ್ಸಿಕ್ಯೂಟಿವ್ ಹುದ್ದೆ ನಿರ್ವಹಿಸಬೇಕು ಎಂದು ಮೇ 15ರಂದು ಗೃಹ ಇಲಾಖೆಯಿಂದ ಆದೇಶ ಹೊರಡಿಸಿತ್ತು. ಆದರೆ ಬಡ್ತಿ ಪಡೆದ ಅಧಿಕಾರಿಗಳು ಕನಿಷ್ಠ 1 ವರ್ಷ ಮಾತ್ರ ಕೆಲಸ ಮಾಡಬೇಕು. ನಾನ್ ಎಕ್ಸಿಕ್ಯೂಟಿವ್ ಹುದ್ದೆ ನಿರ್ವಹಿಸಬೇಕೆಂದು ಆದೇಶ ಮಾರ್ಪಾಡು ಮಾಡಿದೆ.