ಬೆಂಗಳೂರು: ಜನರು ಕೇವಲ ಒಂದು ತಿಂಗಳ ವಾಟರ್ ಬಿಲ್ ಬಾಕಿ ಉಳಿಸಿಕೊಂಡ್ರೆ ಸಾಕು ವಾಟರ್ ಸಪ್ಲೈ ಕಟ್ ಮಾಡುವ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳು ಕೋಟಿ ಕೋಟಿ ಬಾಕಿ ಉಳಿಸಿಕೊಂಡಿದ್ರೂ ಇಲ್ಲಿಯವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸರ್ಕಾರಿ ಸಂಸ್ಥೆಗಳಿಂದ(BWSSB) ಬರೋಬ್ಬರಿ 16201.89 ಕೋಟಿ ಬಿಲ್ ಬರಬೇಕಿದೆ. ಆದ್ರೆ ವಸೂಲಿ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಈಗಾಗಲೇ ಜಲಮಂಡಳಿ ನಷ್ಟದಲ್ಲಿದ್ದು, ಜಲಮಂಡಳಿ ಬರುವ ಆದಾಯ ಸಧ್ಯ ಬೆಸ್ಕಾಂ ಬಿಲ್ ಕಟ್ಟುವುದುಕ್ಕೆ ಸರಿಹೊಂದುತ್ತಿದೆ. ಇದನ್ನ ಸರಿಪಡಿಸುವ ಸಲುವಾಗಿ ಜಲಮಂಡಳಿ ವಾಟರ್ ಬಿಲ್ ಏರಿಕೆಯ ಕುರಿತು ಸರ್ಕಾರಕ್ಕೆ ಪ್ರಸ್ತಾವನೆಯನ್ನ ಸಹ ಸಲ್ಲಿಸಿದೆ. ಜಲಮಂಡಳಿಯ ಮಾಹಿತಿಯ ಪ್ರಕಾರ ಶೇ. 25% ರಷ್ಟು ನೀರಿನ ದರ ಪರಿಷ್ಕರಣೆಗೆ ಮಾಡುವ ಸಾಧ್ಯತೆ ಇದೆ. ಆದ್ರೆ ಮತ್ತೊಂದು ಕಡೆ ಸರ್ಕಾರಿ ಕಚೇರಿಗಳಿಂದಲೇ ನೀರಿನ ಬಿಲ್ ಪಾವತಿಸದೆ ಬರೋಬ್ಬರಿ 16201.89 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿದ್ದು, ಹಲವು ವರ್ಷಗಳಿಂದ ನೀರಿನ ಬಿಲ್ ಕಟ್ಟದೆ ಸರ್ಕಾರಿ ಸಂಸ್ಥೆಗಳು ಕಳ್ಳಾಟವಾಡುತ್ತಿವೆ. ಅಲ್ಲದೇ ಬಾಕಿ ಬಿಲ್ ಕ್ಲಿಯರ್ ಮಾಡಿಕೊಳ್ಳುವ ಸಲುವಾಗಿ ಬಾಕಿ ಮೊತ್ತದ ಮೇಲೆ ಎಷ್ಟೇ ದಂಡ ವಿಧಿಸಿದ್ರೂ ಕೂಡಾ ಡೋಂಟ್ ಕೇರ್ ಎನ್ನುತ್ತಿವೆ ಇಲಾಖೆಗಳು. ಹೀಗಾಗಿ ಜಲಮಂಡಳಿಗೆ ದೊಡ್ಡ ಟೆಕ್ಷನ್ ಶುರುವಾಗಿದೆ.
ಯಾವೆಲ್ಲ ಇಲಾಖೆಗಳು ನೀರಿನ ಬಿಲ್ ಕಟ್ಟಿಲ್ಲ ಅಂತ ನೋಡೋದಾದ್ರೆ
- ಡಿಫೆನ್ಸ್ – 28 ಕೋಟಿ
- ಕೇಂದ್ರ ಸರ್ಕಾರ ಅಧೀನದ ಇಲಾಖೆಗಳು -22 ಕೋಟಿ
- ರಾಜ್ಯ ಸರ್ಕಾರ ಅಧೀನ ಕಚೇರಿಗಳು -8 ಕೋಟಿ
- ಬಿಬಿಎಂಪಿ -21 ಕೋಟಿ
- ನಿಗಮ ಮಂಡಳಿಗಳು -9 ಕೋಟಿ