ಕೊಪ್ಪಳ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ(ಕೆಆರ್ ಪಿಪಿ) ಕಟ್ಟಿ ರಾಜ್ಯ ರಾಜಕಾರಣ ದಲ್ಲಿ ಹಿಡಿತ ಸಾಧಿಸಲು ಮುಂದಾಗಿದ್ದಾರೆ. ಹೊಸ ಪಕ್ಷದೊಂದಿಗೆ ಮೊದಲ ಚುನಾವಣೆ ಎದುರಿಸಿರುವ ಜನಾರ್ದನ ರೆಡ್ಡಿ, ತಾವು ಮಾತ್ರ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಹೊಸ ಪಕ್ಷ ಕಟ್ಟಿ ಗಂಗಾವತಿಯಿಂದ ಸ್ಪರ್ಧಿಸಿ ಗೆದ್ದಿರುವ ಜನಾರ್ದನ ರೆಡ್ಡಿ, ಸ್ಥಳಿಯ ರಾಜಕಾರಣದಲ್ಲೂ ರೆಡ್ಡಿ ಹಿಡಿತ ಸಾಧಿಸಲು ಹೊರಟಿದ್ದಾರೆ. ಈ ವೇಳೆ ಗಣಿಧಣಿಗೆ ಆರಂಭಿಕ ಆಘಾತವಾಗಿದೆ. ಹೌದು..ಮಾಜಿ ಸಚಿವ ಹಾಗೂ ಕೆಆರ್ ಪಿಪಿ ಸಂಸ್ಥಾಪಕ ಗಾಲಿ ಜನಾರ್ದನ ರೆಡ್ಡಿ ಆಪರೇಷನ್ ಪುಟ್ಬಾಲ್ ಉಲ್ಟಾ ಹೊಡೆದಿದೆ. ಬೆಳಿಗ್ಗೆಯಷ್ಟೆ ರೆಡ್ಡಿ ಸಮುಮ್ಮದಲ್ಲೇ ಕಮಲ ತೊರೆದು ಕೆಆರ್ ಪಿಪಿ ಸದಸ್ಯೆಯೊಬ್ಬರು ಮತ್ತೆ ಸಂಜೆಯಾಗುತ್ತಲೇ ಕಮಲ ಮುಡಿದಿದ್ದಾರೆ. ಗಂಗಾವತಿ ನಗರಸಭೆ ವಾರ್ಡ್ ನಂಬರ್ 30ರ ಬಿಜೆಪಿ ಸದಸ್ಯೆ ಸುಚೇತಾ ಶಿರಿಗೇರಿ ಯೂಟರ್ನ್ ಹೊಡೆದಿದ್ದಾರೆ.
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ನಗರಸಭೆ ಸದಸ್ಯೆ ಪಕ್ಷ ಸೇರ್ಪಡೆಗೊಂಡಿದ್ದು, ಖುದ್ದು ಜನಾರ್ದನ ರೆಡ್ಡಿ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದರು. ಆದ್ರೆ ಸಂಜೆಯಾಗುತ್ತಲೇ ಇದೇ ಬಿಜೆಪಿ ಸದಸ್ಯೆ ನಾನು ಕೆಆರ್ ಪಿಪಿ ಪಕ್ಷಕ್ಕೆ ಸೇರ್ಪಡೆ ಆಗೇ ಇಲ್ಲ. ಎಂದು ಯೂಟನ್೯ ಹೊಡೆದಿದ್ದಾರೆ. ಬಿಜೆಪಿ ಮುಖಂಡರುಗಳು, ಹಾಗೂ ಮಾಜಿ ಶಾಸಕ ಪರಣ್ಣ ಮುನವಳ್ಳಿ ನಗರಸಭೆ ಸದಸ್ಯರು ಸುಚೇತಾ ಶಿರಿಗೇರಿ ಭೇಟಿ ಮಾಡಿ ವಿಚಾರಿಸಿದ್ದಾರೆ. ಈ ವೇಳೆ ನಾನು ಕೆಆರ್ಪಿಪಿಗೆ ಸೇರ್ಪಡೆಯಾಗಿಲ್ಲ ಎಂದು ಸುಚೇತಾ ಶಿರಿಗೇರಿ ಸ್ಪಷ್ಟಪಡಿಸಿದರು.
ಶಾಸಕರು ನಮ್ಮ ತಮ್ಮ ಬೆಂಬಲಿಗರೊಂದಿಗೆ ವಾರ್ಡಿನ ಕೆಲ ಸಮಸ್ಯೆಗಳನ್ನು ಆಲಿಸಲು, ಹಾಗೇ ಅಭಿವೃದ್ಧಿ ವಿಷಯವಾಗಿ ನಮ್ಮ ಮನೆಗೆ ಮಾತನಾಡಲು ಬಂದಿದ್ದರು. ಆ ಸಂದರ್ಭದಲ್ಲಿ ಅಚಾತುರ್ಯದಿಂದ ಹಾಗೂ ಅವಸರವಸರವಾಗಿ ನನಗೆ ಅವರ ಪಕ್ಷದ ಶಾಲು ಹಾಕಿ ಫೋಟೋ ತೆಗೆದಿದ್ದಾರೆ ಹೊರತು ನಾನು ಬಿಜೆಪಿ ಪಕ್ಷ ಬಿಟ್ಟು ಹೋಗಿಲ್ಲ. ಮುಂದೆಯೂ ಹೋಗುವದಿಲ್ಲ ಎಂದು ಸುಚೇತಾ ಶಿರಿಗೇರಿ ಹೇಳಿದರು.
ಒಂದೊಂದಾಗೆ ಸ್ಥಳೀಯ ಮಟ್ಟದಲ್ಲಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ನಗರಸಭೆಗಳನ್ನ ತಮ್ಮ ತೆಕ್ಕೆಗೆ ತೆಗೆದುಕೊಳ್ಳಲು ರೆಡ್ಡಿ ಪ್ಲಾನ್ ಮಾಡಿದ್ದಾರೆ. ಈಗಾಗಲೇ ಇದರ ಭಾಗವಾಗಿ ಹಲವು ಗ್ರಾಮ ಪಂಚಾಯತಿಗಳು ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ತೆಕ್ಕೆಗೆ ಜಾರಿವೆ. ಇಷ್ಟೆಲ್ಲಾ ಆಗೋಕೆ ಕಾರಣ ಇದೇ ಆಪರೇಷನ್ ಪುಟ್ಬಾಲ್. ಚುನಾವಣೆ ಮುಂಚೆಯಿಂದಲೂ ಆಪರೇಷನ್ ಪುಟ್ಬಾಲ್ ಮೂಲಕ ಸ್ಥಳಿಯ ಸಂಸ್ಥೆಯ ಸದಸ್ಯರನ್ನು ತಮ್ಮತ್ತ ಸೆಳೆಯುತ್ತಿದ್ದ ರೆಡ್ಡಿ, ನಿನ್ನೆಯೂ ಗಂಗಾವತಿ ನಗರಸಭೆಗೆ ಕೈ ಹಾಕಿದ್ದರು. 30ನೇ ವಾಡ್೯ನ ಬಿಜೆಪಿಯ ಸದಸ್ಯೆ ಸುಚೇತ ಕಾಶೀನಾಥ್ ಸಿರಿಗೆರೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷವನ್ನು ಸೇರ್ಪಡೆಯಾಗಿದ್ದರು.
ಇದೀಗ ಯೂಟರ್ನ್ ಹಪಡೆದಿದ್ದು, ಅಲ್ಲಿಗೆ ಬೆಳಿಗ್ಗೆಯಿಂದ ನಡೆದ ಆಪರೇಷನ್ ಪುಟ್ಬಾಲ್ ಕಥೆ ದಿ ಎಂಡ್ ಆಗಿದೆ. ಗೋಲ್ ಹೊಡೆದಿದ್ದ ಗಣಿ ಧಣಿಗೆ ಸರಿಯಾದ ಸಪೋರ್ಟ್ ಸಿಗದೇ ಆಪರೇಷನ್ ಪುಟ್ಬಾಲ್ ಫೇಲ್ ಆಗಿದೆ.