ವಿಮಾನದಲ್ಲಿ ಮೂತ್ರ ವಿಸರ್ಜಿಸಿ ಅಸಭ್ಯವಾಗಿ ವರ್ತಿಸಿದ ವ್ಯಕ್ತಿಯ ಬಂಧನ

ನವದೆಹಲಿ: ಇತ್ತೀಚೆಗೆ ವಿಮಾನದಲ್ಲಿ ಮೂತ್ರವಿಸರ್ಜನೆ ಮಾಡಿದ ಹಲವು ಪ್ರಕರಣಗಳು ನಡೆಯುತ್ತಿದ್ದು, ಇದೀಗ ವ್ಯಕ್ತಿಯೊಬ್ಬ ಇದೇ ರೀತಿ ದುವರ್ತನೆ ತೋರಿದ್ದಾನೆ.

ಈತ ವಿಮಾನದೊಳಗೆ ಸೀಟ್ ಬಳಿಯೇ ಮೂತ್ರ ವಿಸರ್ಜನೆ ಮಾಡಿ ವಿಕೃತಿ ಮೆರೆದಿದ್ದಾನೆ. ಅಲ್ಲದೆ ಕ್ಯಾಬಿನ್ ಸಿಬ್ಬಂದಿಯ ಎಚ್ಚರಿಕೆ ನಡುವೆಯೂ ಉಗುಳಿ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ರಾಮ್‍ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ. ಈ ಹಿಂದೆಯೂ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರು ಮೂತ್ರ ಮಾಡಿದ್ದ ಘಟನೆಗಳು ವರದಿಯಾಗಿದ್ದವು.