ಮೃತಪಟ್ಟ 4 ವರ್ಷದ ಮಗನನ್ನ ಅಂತ್ಯಕ್ರಿಯೆ ಮಾಡದೇ ಶವ ಬಿಟ್ಟು ಹೋದ ಹೆತ್ತವರು

ಕಲಬುರಗಿ: ನಗರದಲ್ಲೊಂದು ಮನಕಲುಕುವ ಘಟನೆ ನಡೆದಿದೆ. ಹೆತ್ತವರು ಹೀಗೂ ಮಾಡುತ್ತಾರಾ ಎಂಬ ಪ್ರಶ್ನೆ ಮೂಡಿಸುತ್ತದೆ. ಹೌದು ಅನಾರೋಗ್ಯದಿಂದ ಮೃತಪಟ್ಟ  4 ವರ್ಷದ ಮಗನನ್ನ ಹೆತ್ತವರು ಅಂತ್ಯಕ್ರಿಯೆ ಮಾಡದೇ ಶವವನ್ನ ರಸ್ತೆ ಪಕ್ಕದ ಗುಂಡಿಯಲ್ಲಿ ಬಿಟ್ಟು ಹೋದ ಅಮಾನುಷ ಘಟನೆ ಕಲಬುರಗಿಯ ತಾರಪೈಲ್ ಬಡಾವಣೆ ಬಳಿ ನಡೆದಿದೆ. ಇದನ್ನು ನೋಡಿದ ಸ್ಥಳೀಯರು ಬಾಲಕನ ಶವ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೀಗ ಪೊಲೀಸರು ಮೃತ ಬಾಲಕನ ಪೋಷಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಕುರಿತು ಕಲಬುರಗಿ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.