ಕಾಲ ಅದೆಷ್ಟೇ ಬದಲಾದರೂ, ಜನರು ಅದೆಷ್ಟೇ ವಿದ್ಯಾವಂತರಾದರೂ ತಮ್ಮ ಹಳೇ ಚಾಳಿ ಮಾತ್ರ ಬಿಡೋದಿಲ್ಲ. ಹಾಗಾಗಿಯೇ ಇವತ್ತಿಗೂ ಸಮಾಜದಲ್ಲಿ ಅದೆಷ್ಟೋ ಪಿಡುಗುಗಳು ಹಾಗೆಯೇ ಉಳಿದುಕೊಂಡಿವೆ. ಅದರಲ್ಲೊಂದು ವರದಕ್ಷಿಣೆ. ಜನರು ಅದೆಷ್ಟೇ ಶ್ರೀಮಂತರಾದರೂ, ಮದುವೆಯ ಸಂದರ್ಭದಲ್ಲಿ ವರದಕ್ಷಿಣೆ ಕೇಳೋದನ್ನು ಮಾತ್ರ ಬಿಡೋದಿಲ್ಲ. ಮನೆಯಲ್ಲಿ ಅದೆಷ್ಟೇ ಆಸ್ತಿ-ಪಾಸ್ತಿಯಿದ್ದರೂ ಹುಡುಗನ ಕಡೆಯವರು ವಧುವಿನ ಕಡೆಯಿಂದ ಸಿಗೋ ಚಿನ್ನ, ಬಂಗಲೆ, ಕಾರುಗಳು, ಇನ್ಯಾವುದೋ ವಸ್ತುವಿಗೆ ಡಿಮ್ಯಾಂಡ್ ಇಡ್ತಾರೆ. ಅನೇಕ ಸುಶಿಕ್ಷಿತ ಮತ್ತು ಪ್ರಭಾವಿ ಜನರು ಸಹ ವರದಕ್ಷಿಣೆ ಕೇಳಲು ಹಿಂಜರಿಯುವುದಿಲ್ಲ. ವಧುವಿನ ಕಡೆಯವರು ಸಹ ಸುಮ್ನೆ ಯಾಕೆ ರಗಳೆಯೆಂದು ವರನ ಕಡೆಯವರು ಕೇಳಿದ್ದನ್ನು ಕೊಟ್ಟು ಬಿಡುತ್ತಾರೆ. ಹೀಗೆ ವರದಕ್ಷಿಣೆ ಕೇಳಿದ ವರನನ್ನು ಇಲ್ಲೊಂದೆಡೆ ವಧುವಿನ ಕುಟುಂಬದವರು ಮರಕ್ಕೆ ಕಟ್ಟಿ ಹಾಕಿದ್ದಾರೆ. ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ.
ಉತ್ತರ ಪ್ರದೇಶದ ಪ್ರತಾಪ್ಗಢದಲ್ಲಿ ಈ ಘಟನೆ ನಡೆದಿದೆ. ವಧುವಿನ ಕುಟುಂಬದವರು ವರದಕ್ಷಿಣೆಗೆ ಬೇಡಿಕೆಯಿಟ್ಟ ವರನನ್ನು ಮರಕ್ಕೆ ಕಟ್ಟಿ ಹಾಕಿದ್ದಾರೆ. ಹೂಮಾಲೆ ವಿನಿಮಯಕ್ಕೂ ಮುನ್ನ ಈ ಘಟನೆ ನಡೆದಿದೆ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವರ ಅಮರ್ಜೀತ್ನನ್ನು ಕೆಲವರು ಮರಕ್ಕೆ ಕಟ್ಟಿ ಹಾಕಿರುವುದನ್ನು ನೋಡಬಹುದು.