ಉಚಿತ ಬಸ್ ಪ್ರಯಾಣ ಯೋಜನೆ ಜಾರಿಯಾದ ಬೆನ್ನಲ್ಲೇ ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಗಣನೀಯ ಇಳಿಕೆಯಾಗಿದೆ.
ರಾಮನಗರ ಭಾಗದಿಂದ ಬೆಂಗಳೂರು-ಮೈಸೂರು ನಗರಗಳಿಗೆ ಪ್ರತಿದಿನ ನೂರಾರು ಮಹಿಳೆಯರು ಕೆಲಸಕ್ಕೆಂದು ಆಗಮಿಸುತ್ತಿದ್ದರು. ಆದರೆ ಶಕ್ತಿ ಯೋಜನೆಯ ಪರಿಣಾಮ ರೈಲುಗಳ ಮೇಲೆ ಪರಿಣಾಮ ಬೀರಿದೆ.
ಆದರೆ ಇದೇ ವೇಳೆ ಬಸ್ ಗಳು ತುಂಬಿ ತುಳುಕುತ್ತಿವೆ. ಮಹಿಳಾ ಪ್ರಯಾಣಿಕರ ಸಂಖ್ಯೆಯೇ ಹೆಚ್ಚಾಗುತ್ತಿದೆ ಎಂದು ವರದಿ ತಿಳಿಸಿದೆ.
ಮಹಿಳೆಯರಿಗೆ ಶಕ್ತಿ ಯೋಜನೆಯಡಿ ಸರ್ಕಾರಿ ಸಾರಿಗೆ ಬಸ್ನಲ್ಲಿ ಉಚಿತ ಪ್ರಯಾಣ ಆರಂಭಿಸಿದ ಮೊದಲ ದಿನವೇ 5,71,023 ಮಹಿಳೆಯರು ಪ್ರಯಾಣಿಸಿದ್ದಾರೆ.
ಈ ಎಲ್ಲ ಪ್ರಯಾಣದ ಟಿಕೆಟ್ ಮೌಲ್ಯ 1,40,22,878 ರೂ. ಆಗಲಿದೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೆ ಬಂದಿದ್ದು, ಮಹಿಳೆಯರು ಸಾರಿಗೆ ಬಸ್ನಲ್ಲಿ ಉಚಿತವಾಗಿ ಪ್ರಯಾಣಿಸುತ್ತಿದ್ದಾರೆ. ಉಚಿತ ಪ್ರಯಾಣ ಹಿನ್ನೆಲೆ ಬಹುತೇಕ ಮಹಿಳೆಯರು ಸಾರಿಗೆ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ. (ಸಾಂದರ್ಭಿಕ ಚಿತ್ರ)
ಒಟ್ಟಾರೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ರೈಲು ಮತ್ತು ಖಾಸಗಿ ಬಸ್ಗಳಿಗೆ ಹೊರೆ ತಂದಿದೆ