ಕೊಲಂಬೋ (ಜೂನ್ 15, 2023): ಪ್ರಪಂಚದ ಅತಿ ದೊಡ್ಡ ಕಿಡ್ನಿ ಸ್ಟೋನ್ (ಮೂತ್ರಪಿಂಡದ ಕಲ್ಲು) ಅನ್ನು ಹೊರತೆಗೆಯುವ ಮೂಲಕ ಶ್ರೀಲಂಕಾ ಸೇನಾ ವೈದ್ಯರು ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಸುಮಾರು 801 ಗ್ರಾಂ ತೂಕವಿರುವ 13.372 ಸೆ.ಮೀ (5.264 ಇಂಚು) ಉದ್ದವಿರುವ ಕಿಡ್ನಿ ಸ್ಟೋನ್ ಹೊರತೆಗೆಯಲಾಗಿದ್ದು ಇದು ಪ್ರಪಂಚದಲ್ಲಿ ಈವರೆಗೆ ಓರ್ವ ವ್ಯಕ್ತಿಯ ಮೂತ್ರಪಿಂಡದಿಂದ ಹೊರತೆಗೆಯಲಾದ ಅತಿ ದೊಡ್ಡ ಕಲ್ಲಾಗಿದೆ.
ಕೊಲಂಬೋದ ಸೇನಾ ಆಸ್ಪತ್ರೆಯಲ್ಲಿ ಈ ತಿಂಗಳ ಆರಂಭದಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಸೇನೆಯು ಮಂಗಳವಾರ ತಿಳಿಸಿದೆ. ಈ ಮೂಲಕ 13 ಸೆ.ಮೀ ಗಾತ್ರದ ಕಿಡ್ನಿ ಸ್ಟೋನ್ ಹೊರತೆಗೆದಿದ್ದ ಭಾರತದ ದಾಖಲೆಯನ್ನು ಮುರಿದಂತಾಗಿದೆ.