ಮೊಘಲ್ ಚಕ್ರವರ್ತಿ ಷಹಜಹಾನ್ ತನ್ನ ಪತ್ನಿಯ ಪ್ರೇಮದ ಪ್ರತೀಕವಾಗಿ ಭವ್ಯ ತಾಜ್ಮಹಲ್ ನಿರ್ಮಾಣ ಮಾಡಿದ್ದು, ಈ ಸ್ಮಾರಕ ವಿಶ್ವ ವಿಖ್ಯಾತಿಯನ್ನು ಪಡೆದುಕೊಂಡಿರುವುದು ನಿಮಗೆ ಈಗಾಗಲೇ ತಿಳಿದಿರುವ ಸಂಗಂತಿ.
ಪ್ರೀತಿ ಪ್ರೇಮ ಎಂದಾಕ್ಷಣ ಅದು ಕೇವಲ ಸಂಗಾತಿ ಅಥವಾ ದಂಪತಿಗಳಿಗೆ ಮಾತ್ರ ಸೀಮಿತವಲ್ಲ. ತಾಯಿಯ ಪ್ರೀತಿ ಅದಕ್ಕಿಂತಲೂ ಮಿಗಿಲಾದದ್ದು. ಇದಕ್ಕೊಂದು ಉತ್ತಮ ನಿದರ್ಶನವೆಂಬಂತೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ.
ತಮಿಳುನಾಡಿನ ಉದ್ಯಮಿಯೊಬ್ಬರು ತನ್ನ ತಾಯಿಯ ಮೇಲಿನ ಪ್ರೀತಿಗಾಗಿ ತಾಜ್ ಮಹಲ್ ಅನ್ನು ಹೋಲುವಂತಹ ತನ್ನ ತಾಯಿಯ ಭವ್ಯ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ. ಈ ಸ್ಮಾರಕವು ತಮಿಳುನಾಡಿನ ತಿರುವರೂರ್ ಜಿಲ್ಲೆಯಲ್ಲಿದೆ.