ಬೆಂಗಳೂರು (ಜೂ.13): ಅಸ್ಸಾಂ ಮೂಲದ ವ್ಯಕ್ತಿ, ಪಶ್ಚಿಮ ಬಂಗಾಳ ಮೂಲದ ಮಹಿಳೆ ಮದುವೆಯಾಗಿ ಬೆಂಗಳೂರಿನಲ್ಲಿ ಫ್ಲ್ಯಾಟ್‌ನಲ್ಲಿ ವಾಸವಾಗಿದ್ದರು. ಆದರೆ, ಹುಡುಗಿಯ ತಂದೆ ತೀರಿಕೊಂಡ ಹಿನ್ನೆಲೆಯಲ್ಲಿ ಅತ್ತೆ ಮನೆಗೆ ತಾಯಿಯನ್ನ ಕರೆದುಕೊಂಡು ಬಂದು ಇರಿಸಿಕೊಂಡಿದ್ದಳು. ಆದರೆ, ಪ್ರತಿನಿತ್ಯ ಅತ್ತೆಯೊಂದಿಗೆ ತಾಯಿ ಜಗಳ ಮಾಡುತ್ತಿದ್ದಳೆಂದು ತಾಯಿಗೆ 20ಕ್ಕೂ ಅಧಿಕ ನಿದ್ರೆ ಮಾತ್ರೆಗಳನ್ನು ಕೊಟ್ಟು ಕೊಲೆ ಮಾಡಿ ಶವವನ್ನು ಸೂಟ್‌ಕೇಸ್‌ನಲ್ಲಿ ಇಟ್ಟುಕೊಂಡು ಪೊಲೀಸ್ ಠಾಣೆಗೆ ಆಗಮಿಸಿದ ಘಟನೆ ಬೆಂಗಳೂರಿನ ಮೈಕೋಲೇಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಬೀವಾಪಾಲ್ (70) ಎಂದು ಗುರುತಿಸಲಾಗಿದೆ. ಕೊಲೆ ಮಾಡಿದ ಮಹಿಳೆಯನ್ನು ಸೋನಾಲಿ (39) ಆಗಿದ್ದಾಳೆ. ಮೂಲತಃ ಕೋಲ್ಕತ್ತಾದ ಸರ್ಕಾರಿ ಇಲಾಖೆಯ ಕ್ಲರ್ಕ್ ಹಾಗೂ ಮೃತ ತಾಯಿಗೆ ಒಬ್ಬಳೇ ಮಗಳಾದ ಸೋನಾಲಿ ಫಿಸಿಯೋಥೆರಫಿಸ್ಟ್ ಆಗಿದ್ದಳು. ಕುಟುಂಬದವರ ನಿಶ್ಚಯದಂತೆ ಅಸ್ಸಾಂ ಮೂಲದ ಸುಬ್ರತ್ ಸೇನ್ ಎಂಬ ವ್ಯಕ್ತಿಯನ್ನು ಕಳೆದ 10 ವರ್ಷಗಳ ಹಿಂದೆ ವಿವಾಹವಾಗಿದ್ದಳು. ಇವರು ಬೆಂಗಳೂರಿನ ಬಿಳೇಕಹಳ್ಳಿಯಲ್ಲಿ ಎಸ್‌ಎಸ್‌ಆರ್ ಗ್ರೀನ್ ಅಪಾರ್ಟ್‌ಮೆಂಟ್‌ನಲ್ಲಿ ಸ್ವಂತ ಫ್ಲ್ಯಾಟ್ ಹೊಂದಿದ್ದು, ಇದರಲ್ಲಿ ಅತ್ತೆ-ಮಾವ, ಗಂಡ-ಹೆಂಡತಿ ಹಾಗೂ ಮಗ ಸುಖವಾಗಿ ಸಂಸಾರ ಸಾಗುತ್ತಿತ್ತು.