ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಠಾಕೂರ್ಬರಿ ದೇವಸ್ಥಾನಕ್ಕೆ ಬಿಜೆಪಿ ಕೇಂದ್ರ ಸಚಿವರು ಅಪಮಾನ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಗಳ ನಡೆಯುತ್ತಿದೆ. ಮತುವಾ ಸಮುದಾಯದ ದೇವಾಲಯವಾದ ಠಾಕೂರ್ಬರಿ ದೇವಸ್ಥಾನಕ್ಕೆ ಅಗೌರವ ತೋರಿಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಬಿಜೆಪಿ ಮೇಲೆ ಆರೋಪ ಮಾಡಿದ್ದಾರೆ.ಈ ಬಗ್ಗೆ ವೀಡಿಯೊ ಕೂಡ ಒಂದು ವೈರಲ್ ಆಗಿದೆ. ಬಿಜೆಪಿ ನಾಯಕ ಮತ್ತು ಕೇಂದ್ರ ಬಂದರು ಮತ್ತು ಶಿಪ್ಪಿಂಗ್ ರಾಜ್ಯ ಸಚಿವ ಶಂತನು ಠಾಕೂರ್ ಅವರ ಭದ್ರತಾ ಸಿಬ್ಬಂದಿಗಳು ಬೂಟು ಹಾಕಿಕೊಂಡು ಆವರಣಕ್ಕೆ ಬಂದಿದ್ದು, ಮಹಿಳೆಯ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ರಾಜಕೀಯದ ಹೆಸರಿನಲ್ಲಿ ಠಾಕೂರ್ಬಾರಿ ದೇವಾಲಯದ ಪಾವಿತ್ರ್ಯವನ್ನು ಅಪವಿತ್ರಗೊಳಿಸಿದ್ದಾರೆ ಎಂದು ಟಿಎಂಸಿ ಹಿರಿಯ ನಾಯಕ ಮತ್ತು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ. ಇದು ಸಚಿವರ ನಾಚಿಕೆಗೇಡಿನ ಪ್ರದರ್ಶನ ಎಂದು ಹೇಳಿದ್ದಾರೆ.
CISF ಭದ್ರತಾ ಪಡೆಗಳು ಠಾಕೂರ್ಬರಿ ದೇವಸ್ಥಾನಕ್ಕೆ ಬೂಟುಗಳನ್ನು ಧರಿಸಿ ಬಂದಿದ್ದು ಮತ್ತು ಮಹಿಳಾ ಭಕ್ತರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಮೂಲಕ ದೇಗುಲಕ್ಕೆ ಅಗೌರವ ತೋರಿದ ಸಚಿವ ಶಂತನು ಠಾಕೂರ್ ಅವರ ಅತಿರೇಕದ ಕೃತ್ಯವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅವರು ರಾಜಕೀಯದ ಹೆಸರಿನಲ್ಲಿ ಠಾಕೂರ್ಬರಿ ದೇವಾಲಯದ ಪವಿತ್ರತೆಯನ್ನು ಅಪವಿತ್ರಗೊಳಿಸಿದ್ದಾರೆ. ಎಂದು ಸಚಿವ ಶಂತನು ಠಾಕೂರ್ ಅವರನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.