ಬೆಳಗಾವಿ: ಜಿಲ್ಲೆಯ ಅಥಣಿ ತಾಲೂಕಿನ ಸವದಿ ಗ್ರಾಮಕ್ಕೆ ರಾತ್ರೋರಾತ್ರಿ ಆಹಾರ ಅರಸಿ ಮೊಸಳೆ ಯೊಂದು ಬಂದಿದೆ. ಬಳಿಕ ಅದೇ ಗ್ರಾಮದ ಪ್ರಕಾಶ್ ಸನದಿ ಎಂಬುವವರ ಮನೆಗೆ ಮೊಸಳೆ ನುಗ್ಗಿದ್ದು, ಕೂಡಲೇ ಗ್ರಾಮಸ್ಥರು ಸೇರಿ ಮೊಸಳೆಯನ್ನ ಹಗ್ಗದಿಂದ ಕಟ್ಟಿ ಸೆರೆ ಹಿಡಿದಿದ್ದಾರೆ. ನಂತರ ಅರಣ್ಯ ಇಲಾಖೆ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಇನ್ನು ಹತ್ತಿರದಲ್ಲಿ ಕೃಷ್ಣಾ ನದಿ ಇದ್ದು, ಇದೀಗ ಬಿರು ಬಿಸಿಲಿಗೆ ನೀರು ಬತ್ತಿದ ಹಿನ್ನೆಲೆ ಆಹಾರ ಅರಸಿ ಗ್ರಾಮಕ್ಕೆ ಬಂದಿದೆ.