ಚಿಕ್ಕಮಗಳೂರು: ಜೂನ್ 2, ಶುಕ್ರವಾರ ಸಂಭವಿಸಿದ್ದ ಭೀಕರ ರೈಲು ಅಪಘಾತದಲ್ಲಿ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಕಳಸದಿಂದ ಸುಮೇದ್ ಶಿಖರ್ಜಿಗೆ ತೆರಳಿದ್ದ 110 ಜನರು ಪಾರಾಗಿ ಬಂದಿದ್ದರು. ಆದರೆ, ದುರಂತವೆಂಬಂತೆ ಅಪಘಾತದಲ್ಲಿ ಬದುಕುಳಿದಿದ್ದ ಯಾತ್ರಿಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ಧರ್ಮಪಾಲಯ್ಯ(61) ಮೃತ ದುರ್ದೈವಿ. ರೈಲು ಅಪಘಾತವಾದ ಬಳಿಕ ಸುಮೇದ್ ಶಿಖರ್ಜಿಗೆ ತೆರೆಳಿದ್ದರು. ಇದೀಗ ಅಲ್ಲಿಂದ ಹಿಂದಿರುಗುವಾಗ ಹೃದಯಾಘಾತ ಸಂಭವಿಸಿ ಕಳಸ ತಾಲೂಕಿನ ಕಳಕೋಡು ನಿವಾಸಿ, ಉತ್ತರ ಪ್ರದೇಶದ ಮಿರ್ಜಾಪುರ ರೈಲ್ವೇ ಸ್ಟೆಷನ್ ನಲ್ಲಿ ಸಾವನ್ನಪ್ಪಿದ್ದಾರೆ. ಮಿರ್ಜಾಪುರ ಸರ್ಕಾರಿ ಆಸ್ಪತ್ರೆ ಬಳಿ ಯಾತ್ರಿಕರು ಮೃತ ದೇಹಕ್ಕಾಗಿ ಕಾಯುತ್ತಿದ್ದಾರೆ.