ಬೆಂಗಳೂರು: ನಿನ್ನೆ ಅಪರಾತ್ರಿ ದೆಹಲಿಯಿಂದ ಬೆಂಗಳೂರಿಗೆ ವಾಪಸ್ಸಾಗಿದ್ದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಇಂದ ಬೆಳಗ್ಗೆಯೇ ರಾಷ್ಟ್ರದ ರಾಜಧಾನಿಗೆ ವಾಪಸ್ಸು ಹೊರಟರು. ಒಂದು ಚಿಕ್ಕ ಖಾಸಗಿ ಕಾರ್ಯಕ್ರಮಕ್ಕಾಗಿ (private programme) ಬೆಂಗಳೂರಿಗೆ ಬಂದಿದ್ದೆ ಎಂದು ರಾತ್ರಿ ಶಿವಕುಮಾರ್ ಹೇಳಿದ್ದರು. ಕೆಲವೇ ಗಂಟೆಗಳ ಅವಧಿಯಲ್ಲಿ ಅವರು ಆ ಕಾರ್ಯಕ್ರಮ ಮುಗಿಸಿಕೊಂಡು ವಾಪಸ್ಸು ದೆಹಲಿಗೆ ಹೋಗಲು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ಆಗಮಿಸುತ್ತಿರುವುದನ್ನು ಇಲ್ಲಿ ನೋಡಬಹುದು. ಕಾರಿನಿಂದ ಇಳಿಯುವಾಗ ಅವರಿಗೆ ಯಾರದ್ದೋ ಫೊನ್ ಬರುತ್ತದೆ. ಅದನ್ನು ಕಾರಲ್ಲೇ ಕುಳಿತು ಅಟೆಂಡ್ ಮಾಡುವ ಉಪ ಮುಖ್ಯಮಂತ್ರಿಗಳು ಮಾತಾಡುವಾಗ ಅಸಹನೆ ವ್ಯಕ್ತಪಡಿಸುತ್ತಾರೆ.