PM Kisan: ಪಿಎಂ ಕಿಸಾನ್ 14ನೇ ಕಂತು ಸದ್ಯದಲ್ಲೇ; ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯಿರಿ

ಬೆಂಗಳೂರು: ರೈತರಿಗೆ ವರ್ಷಕ್ಕೆ 6,000 ರೂ ಸಹಾಯಧನ ಒದಗಿಸುವ ಪಿಎಂ ಕಿಸಾನ್ ಯೋಜನೆಯ (PM Kisan Yojana) 14ನೇ ಕಂತಿನ ಹಣ ಸದ್ಯದಲ್ಲೇ ಬರುವ ನಿರೀಕ್ಷೆ ಇದೆ. ವರದಿಗಳ ಪ್ರಕಾರ, ಇದೇ ಮೇ ತಿಂಗಳ ಕೊನೆಯ ವಾರದಲ್ಲಿ ಅರ್ಹ ಫಲಾನುಭವಿ ರೈತರಿಗೆ 2,000 ರೂ ಹಣ ಬಿಡುಗಡೆ ಆಗಲಿದೆ. ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ, ಆದರೆ, ಮೂಲಗಳಿಂದ ಮಾಹಿತಿ ಉಲ್ಲೇಖಿಸಿ ಕೆಲ ಮಾಧ್ಯಮಗಳು ವರದಿ ಮಾಡಿವೆ. ಕೇಂದ್ರದಿಂದ 13ನೇ ಕಂತಿನ ಹಣ ಫೆಬ್ರುವರಿಯಲ್ಲಿ ಬಿಡುಗಡೆ ಆಗಿತ್ತು. ಬೆಳಗಾವಿಯ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಬಿಡುಗಡೆ ಆಗಿರುವ ಸಂಗತಿಯನ್ನು ಪ್ರಕಟಿಸಿದ್ದರು. ಇದೀಗ 14ನೇ ಕಂತಿನ ಹಣ ಬಿಡುಗಡೆಗೆ ಕಾಲ ಸನ್ನಿಹಿತವಾಗಿದೆ.
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ 2019ರಲ್ಲಿ ಆರಂಭವಾಗಿದ್ದು. ರೈತರ ವ್ಯವಸಾಯಕ್ಕೆ ಸಹಾಯವಾಗಲೆಂದು ಸರ್ಕಾರ ವರ್ಷಕ್ಕೆ 6,000 ರೂ ನೀಡುತ್ತದೆ. ವರ್ಷಕ್ಕೆ ಒಮ್ಮೆಗೇ ಹಣ ನೀಡುವ ಬದಲಕು 3 ಕಂತುಗಳಲ್ಲಿ ಧನಸಹಾಯ ಒದಗಿಸುತ್ತದೆ. ಅಂದರೆ 2,000 ರೂಗಳ ಮೂರು ಕಂತುಗಳನ್ನು ಸರ್ಕಾರ ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸುತ್ತದೆ. ಕರ್ನಾಟಕದ ರೈತರಿಗೆ ರಾಜ್ಯ ಸರ್ಕಾರ ಇನ್ನೂ 2 ಕಂತು ಸೇರಿಸಿಕೊಡುತ್ತದೆ. ಅಂದರೆ ರಾಜ್ಯದ ರೈತರಿಗೆ ವರ್ಷಕ್ಕೆ 10,000 ರೂ ಸಿಗುತ್ತದೆ. ಪಿಎಂ ಕಿಸಾನ್ ಸ್ಕೀಮ್ನಲ್ಲಿ ನೀವು ಫಲಾನುಭವಿಯಾ ಎಂದು ಪರಿಶೀಲಿಸುವುದು ಹೇಗೆ?
ನೀವು ಈಗಾಗಲೇ ಪಿಎಂ ಕಿಸಾನ್ ಯೋಜನೆಗೆ ನೊಂದಾಯಿಸಿದ್ದು, ಬೆನಿಫಿಷಿಯರಿ ಸ್ಟೇಟಸ್ ಏನಿದೆ ಎಂಬುದನ್ನು ಈ ಕೆಳಗಿನ ಕ್ರಮಗಳಿಂದ ತಿಳಿಯಬಹುದು.
• ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ pmkisan.gov.in ಇಲ್ಲಿಗೆ ಭೇಟಿ ನೀಡಿ
• ಫಾರ್ಮರ್ಸ್ ಕಾರ್ನರ್ ಸೆಕ್ಷನ್ನಲ್ಲಿ ‘ಬೆನಿಫಿಷಿಯರಿ ಸ್ಟೇಟಸ್’ ಅನ್ನು ಕಾಣಬಹುದು.
• ಇದನ್ನು ಕ್ಲಿಕ್ ಮಾಡಿದರೆ ಹೊಸ ಪುಟ ತೆರೆಯುತ್ತದೆ.
• ಇಲ್ಲಿ ನೊಂದಾಯಿತ ಮೊಬೈಲ್ ನಂಬರ್, ಪಿಎಂ ಕಿಸಾನ್ ಖಾತೆ ಸಂಖ್ಯೆ ಅಥವಾ ಆಧಾರ್ ನಂಬರ್ ಅನ್ನು ತುಂಬಿಸಬೇಕು.
• ಕ್ಯಾಪ್ಚಾ ಕೋಡ್ ಹಾಕಿ, ‘ಗೆಟ್ ಡಾಟಾ’ ಕ್ಲಿಕ್ ಮಾಡಿ.
• ಇದಾದಾಗ ನಿಮ್ಮ ಬೆನಿಫಿಷಿಯರಿ ಸ್ಟೇಟಸ್ ಏನು ಎಂಬುದು ಗೊತ್ತಾಗುತ್ತದೆ.
ಪಿಎಂ ಕಿಸಾನ್ ಯೋಜನೆಯ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ತಿಳಿಯುವುದು ಹೇಗೆ?
• ಪಿಎಂ ಕಿಸಾನ್ ಯೋಜನೆಯ ಅಧಿಕೃತ ವೆಬ್ಸೈಟ್ಗೆ ಹೋಗಿ
• ಫಾರ್ಮರ್ಸ್ ಕಾರ್ನರ್ನಲ್ಲಿ ಬೆನಿಫಿಷಿಯರಿ ಲಿಸ್ಟ್ ಮೇಲೆ ಕ್ಲಿಕ್ ಮಾಡಿ
• ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಗ್ರಾಮವನ್ನು ಆಯ್ದುಕೊಳ್ಳಿ.
• ಆ ಗ್ರಾಮದಲ್ಲಿ ಇರುವ ಪಿಎಂ ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ.
• ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ದೃಢಪಡಿಸಿಕೊಳ್ಳಿ.
ಎಂ ಕಿಸಾನ್ ಯೋಜನೆಗೆ ಹೊಸದಾಗಿ ನೊಂದಾಯಿಸುವುದು ಹೇಗೆ?