ನಾಳೆ ಮಹಾಲಯ ಅಮಾವಾಸ್ಯೆ ಸೂರ್ಯಗ್ರಹಣ ಘಟಿಸಲಿದೆ. 15 ದಿನಗಳ ಅಂತರದಲ್ಲಿ ಇದು 2ನೇ ಗ್ರಹಣವಾಗಿದ್ದು, ಇದರ ಪ್ರಭಾವ ಹೇಗಿರಲಿದೆ ಎಂಬ ಪ್ರಶ್ನೆ ಮೂಡಿದೆ.

ಭಾನುವಾರ ಅಮಾವಾಸ್ಯೆ ಪಿತೃಪಕ್ಷವಿದೆ. ಗ್ರಹಣ ದಿನ ಶ್ರಾದ್ಧ ಕಾರ್ಯ ಮಾಡಬಹುದಾ? ಗ್ರಹಣ ಸೂರ್ಯನಿಂದ ಜಗತ್ತಿನಲ್ಲಿ ಸಂಘರ್ಷ ಹೆಚ್ಚಾಗಲಿದೆಯೇ ಎಂಬ ಬಗ್ಗೆಯೂ ಜನರಲ್ಲಿ ಗೊಂದಲ ಇದೆ.
ಮೂರು ತಿಂಗಳ ಕಾಲ ಗ್ರಹಣ ಪ್ರಭಾವ ಇರಲಿದೆ. ಗ್ರಹಣ ನಂತರ 18 ದಿನ ಸಾಕಷ್ಟು ಜಾಗೃತಿ ಅವಶ್ಯಕ. ಗ್ರಹಗತಿಗಳ ಮೇಲೂ ಗ್ರಹಣ ಸೂರ್ಯನ ಪ್ರಭಾವ ಇರಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.
ಗ್ರಹಣದಿಂದ ಯಾವರಾಶಿಗೆ ಶುಭ-ಅಶುಭ?
ವೃಷಭ: ಗ್ರಹಣದ ಪರಿಣಾಮ ಅಶುಭ; ವ್ಯಾಪಾರ-ವ್ಯವಹಾರದಲ್ಲಿ ಜಾಗೃತಿ, ಆರೋಗ್ಯದ ಮೇಲೆ ಗಮನ.
ಮಿಥುನ: ಗ್ರಹಣದಿಂದ ಮಿಶ್ರಫಲ.
ಕಟಕ: ಆರ್ಥಿಕ ಏರುಪೇರು, ಕುಟುಂಬದಲ್ಲಿ ಕಲಹದ ಸಾಧ್ಯತೆ.
ಸಿಂಹ: ಆರೋಗ್ಯ ಸಮಸ್ಯೆಗಳು, ಉದ್ಯೋಗದಲ್ಲಿ ನಷ್ಟ ಸಂಭವಿಸಬಹುದು.
ಕನ್ಯಾ: ನಿದ್ರಾಭಂಗ, ಹೂಡಿಕೆ ನಷ್ಟ, ನಂಬಿ ಹಣ ಕಳೆದುಕೊಳ್ಳುವ ಸಾಧ್ಯತೆ.
ತುಲಾ: ವ್ಯವಹಾರದಲ್ಲಿ ಎಚ್ಚರ, ಸ್ನೇಹಿತರು ದೂರವಾಗುವ ಸಾಧ್ಯತೆ, ಮಾಟ-ಮಂತ್ರದ ಆತಂಕ, ವಾಹನ ಚಾಲನೆ ಜಾಗ್ರತೆಯಿಂದ.
ವೃಶ್ಚಿಕ: ಅಧಿಕಾರಿಗಳ ಒತ್ತಡ, ಆರೋಗ್ಯದ ಕಡೆ ಜಾಗೃತಿ, ಮಿಶ್ರ ಫಲ.
ಧನಸ್ಸು: ತಂದೆ ಆರೋಗ್ಯದ ಮೇಲೆ ಗಮನ, ಕೆಲಸದಲ್ಲಿ ಪೂರ್ವತಯಾರಿ ಅಗತ್ಯ.
ಮಕರ: ವೃತ್ತಿ ಸಂಬಂಧಿ ದೋಷ, ಅನಿರೀಕ್ಷಿತ ಅಪವಾದ ಮತ್ತು ನಿಂದನೆ.
ಕುಂಭ: ಸಂಗಾತಿ ಆರೋಗ್ಯ ಗಮನ, ಪಾಲುದಾರಿಕೆ ವ್ಯವಹಾರದಲ್ಲಿ ಎಚ್ಚರ.
ಮೀನ: ಆರೋಗ್ಯದ ಬಗ್ಗೆ ಎಚ್ಚರಿಕೆ.
ಶ್ರಾದ್ಧ ಕಾರ್ಯ ಮಾಡಬಹುದೇ?
ಮಹಾಲಯ ಅಮಾವಾಸ್ಯೆ ಹಾಗೂ ಸೂರ್ಯಗ್ರಹಣ ಹಿನ್ನೆಲೆಯಲ್ಲಿ ಶ್ರಾದ್ಧ ಕಾರ್ಯ ಮಾಡಬಹುದಾಗಿದೆ. ಭಾರತದಲ್ಲಿ ಸೂರ್ಯಗ್ರಹಣ ಗೋಚರವಾಗದ ಕಾರಣ ಯಾವುದೇ ಅಡ್ಡಿ ಇಲ್ಲ. ಗ್ರಹಣ ಪ್ರಭಾವದಿಂದ ಜಾಗೃತಿ ಇರಬೇಕು: ಆರೋಗ್ಯದ ಏರುಪೇರು, ವಾಹನ ಚಾಲನೆ ವೇಳೆ ಎಚ್ಚರ, ಅನಾರೋಗ್ಯ ಮತ್ತು ಸೋಂಕುಗಳ ಬಗ್ಗೆ ಗಮನವಿಡಿ. ಜನ್ಮ ಜಾತಕ ಬಲವಿದ್ದರೆ ಆತಂಕ ಬೇಡ.
ಸೂರ್ಯಗ್ರಹಣದ ಜಾಗೃತಿ:
ಭಾರತದಲ್ಲಿ ಗೋಚರವಾಗದರೂ ಸೂರ್ಯಗ್ರಹಣದ ಪ್ರಭಾವ ಉಳಿದಿದೆ. ರಾಶಿಗಳ ಮೇಲೆ ಪರಿಣಾಮ ಇರುವುದರಿಂದ ಎಲ್ಲರೂ ಎಚ್ಚರದಿಂದ ಇರಬೇಕು. ಜನ್ಮ ಜಾತಕ ಬಲವಿದ್ದರೆ ಆತಂಕ ಬೇಡ, ಆದರೆ ದುಷ್ಪರಿಣಾಮಗಳು ಸಂಭವಿಸಬಹುದಾಗಿದೆ. ಆರೋಗ್ಯದ ಏರುಪೇರು, ವಾಹನ ಚಾಲನೆ ವೇಳೆ ಎಚ್ಚರತೆ, ಜ್ವರ ಮತ್ತು ಸೋಂಕುಗಳ ಬಗ್ಗೆ ಗಮನವಿಡಿ ಎಂದು ಜ್ಯೋತಿಷಿ ಗುರೂಜಿ ಎಚ್ಚರಿಸಿದ್ದಾರೆ.

