ಬಾಗಲಕೋಟೆ: ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ನೂರಾರು ಎಕರೆ ಬೆಳೆ ನಾಶವಾಗಿದ್ದು, ಇಳಕಲ್ ತಾಲ್ಲೂಕಿನ ಗೋನಾಳ್ ಎಸ್ ಟಿ ಗ್ರಾಮದಲ್ಲಿ ಎರಡು ಮನೆಗಳ ಮೇಲ್ಛಾವಣಿ ಕುಸಿದಿದೆ.

ಗ್ರಾಮದ ಮಹಾಂತೇಶ ಗೌಡರ್ ಅವರ ಮನೆ ಸಂಪೂರ್ಣ ಕುಸಿದಿದ್ದು, ಮೇಲ್ಛಾವಣಿ ನೆಲಕ್ಕೆ ಬಿದ್ದ ಪರಿಣಾಮ ಭಾರಿ ಅನಾಹುತ ಉಂಟಾಗಿದೆ. ಅದೇ ಗ್ರಾಮದ ಯಂಕಣ್ಣ ಹಾಳಕೇರಿ ಅವರ ಮನೆ ಗೋಡೆಯ ಭಾಗ ಕುಸಿದರೂ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಮಳೆಗೆ ಗೋಡೆ ಬಿರುಕು ಬಿಟ್ಟಿದನ್ನು ನೋಡಿದ ಎರಡು ಮನೆಯವರು ಪಕ್ಕದ ಮನೆಗೆ ತೆರಳಿದ್ದಾರೆ. ಅಷ್ಟರಲ್ಲೇ ಮನೆ ಮೇಲ್ಛಾವಣಿ ಕುಸಿದು ಅನಾಹುತ ಸೃಷ್ಟಿಸಿದೆ.
