ಪತ್ನಿ ತೊರೆದ ಕಾರಣ 30 ಅಡಿ ಬ್ರಿಡ್ಜ್ ಮೇಲೆ ಹಾರಿದ ಪತಿ

ಬೀದರ್: ಭಾಲ್ಕಿ ತಾಲ್ಲೂಕಿನ ಹಲಸಿತೂಗಾಂವ್ ಗ್ರಾಮದಲ್ಲಿ, ಮಕ್ಕಳನ್ನು ಕರೆದುಕೊಂಡು ಪತ್ನಿ ತ್ಯಜಿಸಿ ಹೋಗಿದ್ದಕ್ಕೆ 30 ಅಡಿ ಬ್ರಿಡ್ಜ್ ಮೇಲಿಂದ ನದಿಗೆ ಹಾರಿರುವ ಘಟನೆ ನಡೆದಿದೆ.

ವ್ಯಕ್ತಿಯನ್ನು ಹಲಸಿತೂಗಾಂವ್ ಗ್ರಾಮದ ನಿವಾಸಿ ಪ್ರಭಾಕರ್ ಸೂರ್ಯವಂಶಿ (38) ಎಂದು ಗುರುತಿಸ್ಪಟ್ಟಿದ್ದು, ವ್ಯಕ್ತಿ 30 ಅಡಿಯ ಬ್ರಿಡ್ಜ್ ಮೇಲಿಂದ ಮಾಂಜ್ರಾ ನದಿಗೆ ಹಾರುವ ಭಯಾನಕ ದೃಶ್ಯವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಕೆಲವು ವರ್ಷಗಳ ಹಿಂದೆ ಹೆಂಡತಿ ಮತ್ತು ಮಕ್ಕಳು ಬಿಟ್ಟು ತವರು ಮನೆಗೆ ಹೋಗಿದ್ದರು. ಇದರಿಂದ ಮನನೊಂದ ಪತಿ ಪ್ರಭಾಕರ್ ಸೂರ್ಯವಂಶಿ ಕುಡಿತದ ಚಟಕ್ಕೆ ಬಿದ್ದಿದ್ದ. ಇದೀಗ ನದಿಗೆ ಹಾರಿ ನೀರುಪಾಲಾಗಿದ್ದಾನೆ. ಸದ್ಯ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಶೋಧ ಕಾರ್ಯಚರಣೆ ನಡೆಸುತ್ತಿದ್ದಾರೆ .ಈ ಕುರಿತು ಮೆಹಕರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.