ಚಿಕ್ಕಮಗಳೂರು: ಭಾನುವಾರ (ಸೆ.6) ನಡೆಯಲಿರುವ ರಕ್ತ ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ, ಶೃಂಗೇರಿ ಶಾರದಾಂಬೆ ಮತ್ತು ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದೊಂದಿಗೆ ಜಿಲ್ಲೆಯ ಪ್ರಮುಖ ದೇವಾಲಯಗಳಲ್ಲಿ ನಿರಂತರ ಜಲಾಭಿಷೇಕ ಕಾರ್ಯಕ್ರಮಗಳು ನಡೆಯಲಿವೆ. ಭಕ್ತರು ಈ ಪವಿತ್ರ ಘಟನೆಯಲ್ಲಿ ಭಾಗವಹಿಸುವಂತೆ ಕರೆ ಮಾಡಲಾಗಿದೆ.

ಶೃಂಗೇರಿ ದೇಗುಲದಲ್ಲಿ ಮಧ್ಯಾಹ್ನ ಊಟ ಇರಲಿದೆ. ರಾತ್ರಿ ವೇಳೆ ಇರುವುದಿಲ್ಲ. ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಆರಂಭವಾದಾಗಿನಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ.
ಹೊರನಾಡು ಅನ್ನಪೂರ್ಣೇಶ್ವರಿ ದೇಗುಲದಲ್ಲಿ ಮಧ್ಯಾಹ್ನ ಊಟ ಇರಲಿದೆ. ರಾತ್ರಿ ವೇಳೆ ಇರುವುದಿಲ್ಲ. ಪೂಜೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಗ್ರಹಣ ಆರಂಭವಾದಾಗಿನಿಂದ ಅಂತ್ಯದವರೆಗೂ ನಿರಂತರ ಜಲಾಭಿಷೇಕ ನಡೆಯಲಿದೆ.
ಕಿಗ್ಗಾದ ಋಷ್ಯಶೃಂಗೇಶ್ವರ ಹಾಗೂ ಕಳಸದ ಕಳಸೇಶ್ವರ ದೇಗುಲದಲ್ಲೂ ವಿಶೇಷ ಪೂಜೆ ನಡೆಯಲಿದೆ. ಪ್ರಸಾದ ಇರುವುದಿಲ್ಲ. ಗ್ರಹಣದ ವೇಳೆ ಈಶ್ವರನಿಗೆ ನಿರಂತರ ಜಲಾಭಿಷೇಕ ನಡೆಯಲಿದೆ. ನಾಲ್ಕು ಪ್ರಮುಖ ದೇವಾಲಯದಲ್ಲೂ ಗ್ರಹಣ ಆರಂಭದಿಂದ ಅಂತ್ಯದವರೆಗೆ ನಿರಂತರ ಜಲಾಭಿಷೇಕ ನಡೆಯಲಿದೆ.
