
ಹೊನ್ನಾವರ ಆ.16 : ಹೊನ್ನಾವರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂ.ಪಿ.ಇ. ಸೊಸೈಟಿಯ ಕೇಂದ್ರೀಯ ವಿದ್ಯಾಲಯದಲ್ಲಿ 79ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂಭ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಯುತ ಕೃಷ್ಣಮೂರ್ತಿ ಭಟ್ಟ ಶಿವಾನಿಯವರು ಭಾಗವಹಿಸಿ “ದೇಶ ಕಟ್ಟುವಾಗ ದೇಶ ಬಾಂದವರಲ್ಲಿ ಬಾಂಧವ್ಯ ಬೆಸೆದಿರಬೇಕು. ಹಾಗೆಯೇ ಒಂದು ಸಂಸ್ಥೆ,ಸಮಾಜ ಸರಿಯಾದ ಮಾರ್ಗದಲ್ಲಿ ಸಾಗಬೇಕಾದರೆ ವೃತ್ತಿ ಗೌರವದ ಜೊತೆ ಬಾಂಧವ್ಯ ಇರಬೇಕು”. ಎಂಬ ಕಿವಿಮಾತನ್ನು ಹೇಳಿದರು.
ಭಾರತಕ್ಕೆ ಬಹಳ ಮಹತ್ವದ ದಿನವಾಗಿದೆ. ಈ ದಿನವನ್ನು ಭಾರತದ ಸ್ವಾತಂತ್ರ್ಯದ ಸಂಕೇತವಾಗಿ ಆಚರಿಸಲಾಗುತ್ತದೆ ಮತ್ತು ಬ್ರಿಟಿಷ್ ಆಳ್ವಿಕೆಯಿಂದ ಭಾರತವು ಸ್ವತಂತ್ರವಾದ ದಿನವನ್ನು ನೆನಪಿಸುತ್ತದೆ. ಈ ದಿನವನ್ನು ಭಾರತದಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತದೆ, ಮತ್ತು ಇದು ದೇಶಭಕ್ತಿ ಮತ್ತು ರಾಷ್ಟ್ರೀಯ ಏಕತೆಯ ಭಾವನೆಯನ್ನು ಉತ್ತೇಜಿಸುತ್ತದೆ.
ಪ್ರಾಂಶುಪಾಲರಾದ ಡಾ.ವಿಜಯಲಕ್ಷ್ಮೀ ನಾಯ್ಕ ಧ್ವಜಾರೋಹಣ ನೆರವೇರಿಸಿ ಎಲ್ಲರಿಗೂ ಶುಭಹಾರೈಸಿದರು. ದೈಹಿಕ ಶಿಕ್ಷಕರಾದ ದಯಾನಂದ ನಾಯ್ಕ ಇವರ ಮಾರ್ಗದರ್ಶನದಲ್ಲಿ ವಿವಿಧ ಹೌಸ್‌ನ ವಿದ್ಯಾರ್ಥಿಗಳು ಪಥ ಸಂಚಲನ ಪ್ರದರ್ಶಿಸಿದರು.ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಎಲ್ಲ ಶಿಕ್ಷಕವೃಂದದವರು ಹಾಗೂ ಶಿಕ್ಷಕೇತರ ಸಿಬ್ಬಂದಿಯವರು ಭಾಗವಹಿಸಿದ್ದರು.ಶಿಕ್ಷಕಿಯಾದ ವಿಜಯಲಕ್ಷ್ಮೀ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿಯಾದ ಶಾರದಾ ಭಟ್ಟ ವಂದಿಸಿದರು.
