ರ‍್ಯಾಗಿಂಗ್ ಪೀಡನೆ ಕೊನೆಗೊಳಿಸಿದ ವಿದ್ಯಾರ್ಥಿನಿ – ಡೆತ್ ನೋಟ್‌ನಲ್ಲಿ ಆರೋಪಿಗಳ ಪಟ್ಟಿ ಬರೆದಿಟ್ಟು ಆತ್ಮಹತ್ಯೆ

ಬಾಗಲಕೋಟೆ, (ಆಗಸ್ಟ್ 09): ಸಹಪಾಠಿಗಳ ರ‍್ಯಾಗಿಂಗ್ ಗೆ   ಮನನೊಂದ ಎಂಎ ಅಂತಿಮ ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ ಪಟ್ಟಣದಲ್ಲಿ ನಡೆದಿದೆ. ರ‍್ಯಾಗಿಂಗ್ ಬಗ್ಗೆ ಡೆತ್​​ ನೋಟ್​ ಬರೆದಿಟ್ಟು ಅಂಜಲಿ ಮುಂಡಾಸ(21) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಭಂಡಾರಿ ‌ಕಾಲೇಜಿನ ಬಿಎ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಅಂಜಲಿ, ನಿನ್ನೆ ಕಾಲೇಜಿನಲ್ಲಿ ನಡೆದ ರ‍್ಯಾಗಿಂಗ್   , ಮಾನಸಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ಸಾವಿಗೆ ಶರಣಾಗಿದ್ದಾರೆ. ಇನ್ನು ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಮೂವರ ಹೆಸರು ಹಾಗೂ ಅವರ ಮೊಬೈಲ್​ ನಂಬರ್ ಬರೆದಿಟ್ಟಿದ್ದಾಳೆ.

ನನ್ನ ಸಾವಿಗೆ ಕಾರಣ ವರ್ಷಾ ಜಮ್ಮನಕಟ್ಟಿ ಹಾಗೂ ಪ್ರದೀಪ್ ಅಳಗುಂದಿ ಕಾರಣ. ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ, ನನಗೆ ಮಾರಕವಾಗಿದ್ದಾರೆ. ಇವರನ್ನು ಸುಮ್ಮನೆ ಬಿಡಬೇಡಿ. ಗುಡ್ ಬೈ ಎಂದು ಸಹಿ ಮಾಡಿ ಆತ್ಮಹತ್ಯಗೆ ಶರಣಾಗಿದ್ದಾಳೆ. ಈ ಸಂಬಂಧ ಗುಳೇದಗುಡ್ಡ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಡೆತ್​ ನೋಟ್​​ ನಲ್ಲಿದೆ?

ನನ್ನ ಸಾವಿಗೆ ಕಾರಣವಾದ ಈ ಮೂವರು ವ್ಯಕ್ತಿಗಳು ನನ್ನ ಬದುಕಿನಲ್ಲಿ ಪರಿಣಾಮವನ್ನು ಬೀರಿದ್ದಾರೆ.ಅವರುಗಳೆಂದರೆ ವರ್ಷಾ, ಪ್ರದೀಪ್ ಮತ್ತು ಇನ್ನಿತರ ಸ್ನೇಹಿತರು ನನ್ನ ಬಗ್ಗೆ ನನ್ನನ್ನು ಮಾನಸಿಕವಾಗಿ ಕುಗ್ಗಿಸಿದ್ದಾರೆ. ಮತ್ತು ಅವರು ನನ್ನ ಬದುಕಿನ ಮಾರಕ ವ್ಯಕ್ತಿಗಳಾಗಿರುತ್ತಾರೆ. ಇವರನ್ನು ಸುಮ್ಮನೆ ಬಿಡಬಾರದು. ಎಂದು ಸಹಿ ಮಾಡಿದ್ದಾರೆ.