ಬೆಂಗಳೂರು: ಮೈದುಂಬಿದ ಕೃಷ್ಣರಾಜ ಸಾಗರ ಜಲಾಶಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬಾಗಿನ ಅರ್ಪಿಸಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗುವರು.

1941ರ ಬಳಿಕ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಜಲಾಶಯದಲ್ಲಿ ನೀರಿನ ಮಟ್ಟ 124 ಅಡಿ ತಲುಪಿದೆ. ಸಾಮಾನ್ಯವಾಗಿ ಜುಲೈ ತಿಂಗಳಾಂತ್ಯ ಅಥವಾ ಆಗಸ್ಟ್‌ನಲ್ಲಿ ಕೆಆರ್ಎಸ್ಗೆ ಬಾಗಿನ ಅರ್ಪಿಸಲಾಗುತ್ತದೆ. ಆದರೆ, ಈ ಬಾರಿ ಉತ್ತಮ ಮುಂಗಾರು ಮಳೆಯಾಗುತ್ತಿದ್ದು, ಜಲಾಶಯ ಜೂನ್ನಲ್ಲೇಭರ್ತಿಯಾಗಿದೆ.
1941 ಜೂನ್ 21ರಲ್ಲಿ 121.45 ಅಡಿ ನೀರು ತುಂಬಿತ್ತು. ಇದೀಗ ನೀರಿನ ಮಟ್ಟ 124 ಅಡಿ ತಲುಪಿದೆ.
ಕೆಆರ್‌ಎಸ್ ನೀರಿನ ಮಟ್ಟದ ಇತಿಹಾಸ:
| ವರ್ಷ, ತಿಂಗಳು | ಮಟ್ಟ(ಅಡಿಗಳಲ್ಲಿ) |
| 1941, ಜೂನ್ | 121.45 |
| 1954, ಜೂನ್ | 103.83 |
| 1957, ಜೂನ್ | 103.99 |
| 1973, ಜೂನ್ | 110.25 |
| 1961,1962, 1963, ಜೂನ್ | 100 |
| 1976, ಜೂನ್ | 104.56 |
| 1978, ಜೂನ್ | 107.57 |
| 1980, ಜೂನ್ | 106.80 |
| 1984, ಜೂನ್ | 109.16 |
| 2004, ಜೂನ್ | 102.10 |
| 2008, ಜೂನ್ | 102.48 |
| 2018, ಜೂನ್ | 103.85 |
| 2022, ಜೂನ್ | 106.30 |
| 2025, ಜೂನ್ | 118.60 |
ಉಳಿದಂತೆ, ಜಲಾಶಯದ ನೀರಿನ ಮಟ್ಟ ಜೂನ್‌ನಲ್ಲಿ ಸರಾಸರಿ 70-80 ಅಡಿ ಆಸುಪಾಸಿನಲ್ಲಿತ್ತು.

