ಬೆಂಗಳೂರು : ಸಾರ್ವಜನಿಕರ ಉಪಯೋಗಕ್ಕಾಗಿ ರಾಜ್ಯದ ಉಪನೋಂದಣಿ ಕಚೇರಿಗಳು 2ನೇ ಶನಿವಾರ, 4ನೇ ಶನಿವಾರ ಮತ್ತು ಭಾನುವಾರಗಳ ರಜಾ ದಿನಗಳಂದು ಜೂನ್ 1 ರಿಂದ ಕಾರ್ಯನಿರ್ವಹಿಸಲಿವೆ.

ಜಿಲ್ಲೆಗೆ ಒಂದು ಉಪನೋಂದಣಾಧಿಕಾರಿಗಳ ಕಚೇರಿ 2 ಮತ್ತು 4ನೇ ಶನಿವಾರ ಹಾಗೂ ಎಲ್ಲಾ ಭಾನುವಾರಗಳ ದಿನಗಳಂದು ಕಾರ್ಯನಿರ್ವಹಿಸಲು ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.


ಸಾರ್ವಜನಿಕರು ಸಂಬಂಧಪಟ್ಟ ಜಿಲ್ಲೆಯ ಯಾವುದೇ ಸ್ವತ್ತುಗಳನ್ನು ಸಂಬಂಧಿಸಿದ ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಹಾಗೂ ಸಾರ್ವಜನಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಆದೇಶದಲ್ಲಿ ಕೋರಲಾಗಿದೆ.
ಈ ಕೆಳಕಂಡ ಉಪನೋಂದಣಿ ಕಚೇರಿಗಳು ಜೂನ್ 1 ರಿಂದ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಎಲ್ಲಾ ಭಾನುವಾರಗಳಂದು ಕಾರ್ಯನಿರ್ವಹಿಸಲಿವೆ.
ಉಪನೋಂದಣಿ ಕಚೇರಿಗಳ ಮಾಹಿತಿ: ಬಸವನಗುಡಿ ಉಪನೋಂದಣಾಧಿಕಾರಿ ಕಚೇರಿ ಬಸವನಗುಡಿ, ಗಾಂಧಿನಗರ, ಜಯನಗರ, ರಾಜಾಜಿನಗರ-ಮಾದನಾಯಕನಹಳ್ಳಿ, ಶಿವಾಜಿನಗರ, ಬೆಂಗಳೂರು ಗ್ರಾಮಾಂತರ-ದೇವನಹಳ್ಳಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ-ಬಾಗೇಪಲ್ಲಿ, ದಾವಣಗೆರೆ, ರಾಮನಗರ, ಶಿವಮೊಗ್ಗ, ತುಮಕೂರು-ಕುಣಿಗಲ್, ಕೋಲಾರ, ಬೆಳಗಾವಿ-ಮೂಡಲಗಿ, ಬಾಗಲಕೋಟೆ-ಇಳಕಲ್, ಧಾರವಾಡ-ಹುಬ್ಬಳ್ಳಿ ಉತ್ತರ, ಗದಗ-ಗಜೇಂದ್ರಗಡ, ಕಾರವಾರ/ಉತ್ತರ ಕನ್ನಡ- ಕುಮಟಾ, ಹಾವೇರಿ, ವಿಜಯಪುರ, ಚಾಮರಾಜನಗರ- ಕುದೇರು, ಹಾಸನ-ಸಕಲೇಶಪುರ, ಕೊಡಗು-ಮಡಿಕೇರಿ, ಚಿಕ್ಕಮಗಳೂರು, ದಕ್ಷಿಣಕನ್ನಡ- ಮಂಗಳೂರು ಸಿಟಿ, ಮಂಡ್ಯ-ಮಳವಳ್ಳಿ, ಮೈಸೂರು-ಮೈಸೂರು ದಕ್ಷಿಣ, ಉಡುಪಿ, ಕೊಪ್ಪಳ-ಗಂಗಾವತಿ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ-ಹೂವಿನಹಡಗಲಿ.

