ಮೈಸೂರು: ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಮೂವರ ಸಾವು

ಮೈಸೂರು, ಜೂನ್​ 04: ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಜೆ.ಪಿ ಹುಂಡಿ ಬಳಿ ಬೈಕ್ ಮತ್ತು ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಂಚಿಪುರ ಗ್ರಾಮದ ನಿವಾಸಿಗಳಾದ ಚೆನ್ನಮಲ್ಲಮ್ಮ, ಮಂಗಳು ರೂಪ, ಅಳಿಯ ಚಿನ್ನಸ್ವಾಮಿ ಮೃತದುರ್ದೈವಿಗಳು. ಮೂವರು ಮಾದನಹಳ್ಳಿಯಿಂದ ತಮ್ಮ ಊರಿಗೆ ತೆರೆಳ್ಳುತ್ತಿದ್ದರು. ಲಾರಿ ಹುಲ್ಲಹಳ್ಳಿಯಿಂದ ಸಂಗಮ ಕಡೆಗೆ ತೆರಳುತ್ತಿತ್ತು. ದಾರಿ ಮಧ್ಯೆ ಜೆಪಿ ಹುಂಡಿ ಬಳಿ ಅಪಘಾತ ಸಂಭವಿಸಿದೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.