ಚಿನ್ನ,ಬೆಳ್ಳಿ ಎರಡೂ ಬೆಲೆ ಏರಿಕೆ

ಬೆಂಗಳೂರು, ಜೂನ್ 4: ಕಳೆದ ಎರಡು ಮೂರು ದಿನಗಳಿಂದ ಚಿನ್ನದ ಬೆಲೆ  ಏರಿಕೆ ಆಗುವುದು ಮುಂದುವರಿದಿದೆ. ಎರಡು ದಿನದಲ್ಲಿ 160 ರೂಗಳಷ್ಟು ಏರಿದ್ದ ಚಿನ್ನದ ಬೆಲೆ ಇಂದು ಬುಧವಾರ 10 ರೂ ಹೆಚ್ಚಳಗೊಂಡಿದೆ. ವಿದೇಶಗಳಲ್ಲಿಯೂ ಹಲವೆಡೆ ಬೆಲೆ ಇಳಿಕೆ ಆಗಿದೆ. ಮಲೇಷ್ಯಾದಂಥ ಕೆಲ ದೇಶಗಳಲ್ಲಿ ಬೆಲೆ ಹೆಚ್ಚಳವಾಗಿದೆ. ಚಿನ್ನದ ಬೆಲೆ ಏರಿಕೆ ಆಗುತ್ತಿರುವಾಗ ಮೌನವಾಗಿದ್ದ ಬೆಳ್ಳಿಯ ಬೆಲೆಯಲ್ಲಿ ಇವತ್ತು ಭರ್ಜರಿ ಹೆಚ್ಚಳವಾಗಿದೆ. ಗ್ರಾಮ್​​ಗೆ 2 ರೂನಷ್ಟು ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 99,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,200 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,200 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಜೂನ್ 4ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,170 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 74,380 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 99,170 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,020 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 90,900 ರೂ
  • ಚೆನ್ನೈ: 90,900 ರೂ
  • ಮುಂಬೈ: 90,900 ರೂ
  • ದೆಹಲಿ: 91,050 ರೂ
  • ಕೋಲ್ಕತಾ: 90,900 ರೂ
  • ಕೇರಳ: 90,900 ರೂ
  • ಅಹ್ಮದಾಬಾದ್: 90,950 ರೂ
  • ಜೈಪುರ್: 91,050 ರೂ
  • ಲಕ್ನೋ: 91,050 ರೂ
  • ಭುವನೇಶ್ವರ್: 90,900 ರೂ