‘ಅರ್ಜುನ್ ರೆಡ್ಡಿ’ ಸಿನಿಮಾ ವಿಜಯ್ ದೇವರಕೊಂಡ ಅವರನ್ನು ರಾತ್ರೋರಾತ್ರಿ ಸ್ಟಾರ್ ಮಾಡಿತು. ಅಸಲಿಗೆ ಈ ಸಿನಿಮಾ ಮೊದಲು ಆಫರ್ ಆಗಿದ್ದು ಬೇರೊಬ್ಬ ನಟನಿಗೆ. ‘ಅರ್ಜುನ್ ರೆಡ್ಡಿ’ ಸಿನಿಮಾ ಕೈಬಿಟ್ಟ ಆ ನಟ ಈಗ ಸಿನಿಮಾ ಅವಕಾಶಗಳಾಗಿ ಹೆಣಗಾಡುತ್ತಿದ್ದಾರೆ. ವಿಲನ್ ಪಾತ್ರಗಳಲ್ಲಿ ಸಹ ನಟಿಸುತ್ತಿದ್ದಾರೆ. ಯಾರು ಆ ನಟ?

‘ಅರ್ಜುನ್ ರೆಡ್ಡಿ’ ಸಿನಿಮಾ ತೆಲುಗು ಚಿತ್ರರಂಗದ ಕಲ್ಟ್ ಸಿನಿಮಾಗಳ ಪಟ್ಟಿಗೆ ಸೇರಿಕೊಂಡು ಬಿಟ್ಟಿದೆ. ಭಿನ್ನ ರೀತಿಯ ಪಾತ್ರಗಳು, ದೇವದಾಸ್ ಕತೆಯನ್ನು ಆಧುನಿಕವಾಗಿ ಹೇಳಿದ್ದ ‘ಅರ್ಜುನ್ ರೆಡ್ಡಿ’ ಸಿನಿಮಾ ಭಾರಿ ದೊಡ್ಡ ಗೆಲುವು ಸಾಧಿಸಿದ್ದು ಮಾತ್ರವೇ ಅಲ್ಲದೆ ಸಿನಿಮಾದಲ್ಲಿ ಕೆಲಸ ಮಾಡಿದ್ದ ಎಲ್ಲರಿಗೂ ಜನಪ್ರಿಯತೆ, ಸಾಕಷ್ಟು ಅವಕಾಶಗಳನ್ನು ತಂದುಕೊಟ್ಟಿತು. ಸಿನಿಮಾದಲ್ಲಿ ನಾಯಕನ ಪಾತ್ರದಲ್ಲಿ ನಟಿಸಿದ್ದ ವಿಜಯ್ ದೇವರಕೊಂಡ ರಾತ್ರೋರಾತ್ರಿ ಸ್ಟಾರ್ ಆದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಸಹ ಸ್ಟಾರ್ ಆದರು. ನಾಯಕಿ ಶಾಲಿನಿ ಪಾಂಡೆ ಸಹ ಸ್ಟಾರ್ ಆದರು. ಆದರೆ ಆ ಸಿನಿಮಾದ ನಾಯಕ ಪಾತ್ರಕ್ಕೆ ಮೊದಲ ಆಯ್ಕೆ ವಿಜಯ್ ದೇವರಕೊಂಡ ಆಗಿರಲಿಲ್ಲ.
ತೆಲುಗು ಚಿತ್ರರಂಗದ ಆರಕ್ಕೇರದ ಮೂರಕ್ಕಿಳಿಯುವ ಹಾದಿಯಲ್ಲಿರುವ ನಟ ಮಂಚು ಮನೋಜ್ ಅವರು ‘ಅರ್ಜುನ್ ರೆಡ್ಡಿ’ ಸಿನಿಮಾನಲ್ಲಿ ನಟಿಸಬೇಕಿತ್ತಂತೆ. 2013 ರಲ್ಲಿ ಸಂದೀಪ್ ರೆಡ್ಡಿ ವಂಗಾ ಮಂಚು ಮನೋಜ್ ಅವರಿಗೆ ‘ಅರ್ಜುನ್ ರೆಡ್ಡಿ’ ಸಿನಿಮಾದ ಕತೆ ಹೇಳಿದ್ದರಂತೆ. ಆದರೆ ವೈಯಕ್ತಿಕ ಕಾರಣಗಳಿಂದ ಆ ಸಿನಿಮಾದಲ್ಲಿ ನಟಿಸಿರಲಿಲ್ಲ. ಆದರೆ ಆ ಸಿನಿಮಾ ಮಿಸ್ ಮಾಡಿಕೊಂಡಿದ್ದಕ್ಕೆ ಬೇಸರ ಇದೆ. ಅದ್ಭುತ ನಿರ್ದೇಶಕನ ಜೊತೆಗೆ ಕೆಲಸ ಮಾಡುವ ಅವಕಾಶವನ್ನು ನಾನು ಕಳೆದುಕೊಂಡೆ’ ಎಂದಿದ್ದಾರೆ.
‘ಅರ್ಜುನ್ ರೆಡ್ಡಿ’ ಮಾತ್ರವೇ ಅಲ್ಲದೆ, ರಾಮ್ ಚರಣ್ ನಟಿಸಿದ ಸೂಪರ್ ಹಿಟ್ ಸಿನಿಮಾ ‘ರಚ್ಚ’, ನಾಗ ಚೈತನ್ಯ ನಟಿಸಿದ ‘ಆಟೋನಗರ್ ಸೂರ್ಯ’ ಸಿನಿಮಾಗಳು ಸಹ ಮೊದಲು ಮಂಚು ಮನೋಜ್ಗೆ ಆಫರ್ ಆಗಿದ್ದವಂತೆ ಆದರೆ ವೈಯಕ್ತಿಕ ಕಾರಣಗಳಿಂದ ಆ ಸಿನಿಮಾಗಳಲ್ಲಿಯೂ ಮಂಚು ಮನೋಜ್ ನಟಿಸಲಿಲ್ಲವಂತೆ. ಆದರೆ ಹೀಗೆ ಅವಕಾಶಗಳನ್ನು ಕೈಬಿಟ್ಟ ಕಾರಣದಿಂದಲೇ ಮಂಚು ಮನೋಜ್ ಈಗ ವೃತ್ತಿ ಜೀವನದ ಇಳಿಜಾರಿನಲ್ಲಿದ್ದಾರೆ.
ಮಂಚು ಮನೋಜ್ 2017 ರ ಬಳಿಕ ಯಾವುದೇ ಸಿನಿಮಾದಲ್ಲಿ ನಾಯಕನಾಗಿ ನಟಿಸಿರಲಿಲ್ಲ. ಈಗ ಏಳು ವರ್ಷಗಳ ಬಳಿಕ ಮಂಚು ಮನೋಜ್ ಮತ್ತೆ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಭೈರವಂ’ ಸಿನಿಮಾನಲ್ಲಿ ನಟಿಸಿದ್ದು, ಮೂವರು ನಾಯಕರಲ್ಲಿ ಒಬ್ಬರು. ‘ಮಿರಾಯ್’ ಸಿನಿಮಾನಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದಾರೆ. ‘ವಾಟ್ ದಿ ಫಿಶ್’ ಹೆಸರಿನ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.
