
ಮಂಗಳೂರು: ನಗರದಲ್ಲಿ ಭಾರಿ ಮಳೆಯಾಗುತ್ತಿದೆ. ಪಂಪ್‌ವೆಲ್ ಸೇತುವೆ ಬಳಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿರಂತರ ಮಳೆಗೆ ರಾಜಕಾಲುವೆಯಲ್ಲಿ ನೀರು ಹರಿದಿದೆ. ನಗರದ ಪಂಪ್‌ವೆಲ್‌ನಲ್ಲಿ ರಸ್ತೆ ಮೇಲೆ ಮಳೆ ನೀರು ಹರಿದಿದೆ. ಪರಿಣಾಮ ಪಂಪ್‌ವೆಲ್‌ನಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಎರಡು ಗಂಟೆಯಿಂದ ನಿರಂತರವಾಗಿ ಮಳೆ ಸುರಿದಿದೆ. ಪಂಪ್‌ವೆಲ್ ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತವಾಗಿದೆ.
