
ಯಾದಗಿರಿ, ಮೇ 18: ಸುರಪುರ ತಾಲೂಕಿನ ಏವೂರ ಗ್ರಾಮದ ಬಳಿಯ ಬಸವಸಾಗರ ಜಲಾಶಯದ ಜೆಬಿಸಿ ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಕುರಿಗಾಹಿಗಳು ನೀರುಪಾಲಾಗಿದ್ದಾರೆ. ವಿಜಯಪುರ ಮೂಲದ ಜಟ್ಟೆಪ್ಪ (19), ಕರಿಯಪ್ಪ (19) ಮೃತರು. ರವಿವಾರ (ಮೇ.18) ಒಟ್ಟು ಆರು ಮಂದಿ ಕುರಿಗಾಯಿಗಳು ಕುರಿ ಮೇಯಿಸಲು ತೆರಳಿದ್ದರು. ಆರೂ ಮಂದಿ ಕಾಲುವೆಯಲ್ಲಿ ಈಜಲು ತೆರಳಿದ್ದಾರೆ. ಆರು ಮಂದಿ ಕುರಿಗಾಹಿಗಳ ಪೈಕಿ ಇಬ್ಬರು ನೀರುಪಾಲಾಗಿದ್ದು, ನಾಲ್ವರು ಪಾರಾಗಿದ್ದಾರೆ. ನೀರುಪಾಲಾಗಿರುವ ಕುರಿಗಾಹಿಗಳಿಗಾಗಿ ಕಾಲುವೆಯಲ್ಲಿ ಶೋಧ ಕಾರ್ಯಾ ನಡೆಯುತ್ತಿದೆ. ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
