ಹುಬ್ಬಳ್ಳಿ, ಮೇ 02: ಗುಂತಕಲ್ ವಿಭಾಗದ ಪ್ರಮುಖ ರೈಲು ನಿಲ್ದಾಣವಾದ ಧರ್ಮಾವರಂ ಜಂಕ್ಷನ್‌ನಲ್ಲಿ ಎರಡನೇ ಹಂತದ ಯಾರ್ಡ್ ಮಾರ್ಪಾಡು ಮತ್ತು ಆಧುನೀಕರಣ ಕಾಮಗಾರಿಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಿನಲ್ಲಿ ಹಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಕೆಲವು ರೈಲುಗಳನ್ನು ರದ್ದುಗೊಳಿಸಲಾಗಿದೆ ಇನ್ನು ಕೆಲವು ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ ಹಾಗೂ ಕೆಲವು ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುವುದು ಎಂದು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.

ರೈಲು ರದ್ದು
- ಕೆಎಸ್ಆರ್ ಬೆಂಗಳೂರು-ಧರ್ಮಾವರಂ ನಡುವಿನ ಮೆಮು ವಿಶೇಷ ರೈಲುಗಳು (ಸಂಖ್ಯೆ 06595/06596) ಮೇ 5 ರಿಂದ 17 ರವರೆಗೆ, ಗುಂತಕಲ್-ಹಿಂದೂಪುರ (77213) ಮೇ 4 ರಿಂದ 17 ರವರೆಗೆ ಹಾಗೂ ಹಿಂದೂಪುರ-ಗುಂತಕಲ್ (77214) ನಡುವಿನ ಡೆಮು ರೈಲುಗಳು ಮೇ 5 ರಿಂದ 18 ರವರೆಗೆ ರದ್ದಾಗಿರಲಿವೆ.
- ಯಶವಂತಪುರ-ಬೀದರ್ (16571) ಎಕ್ಸ್‌ಪ್ರೆಸ್ ರೈಲು ಮೇ 11, 12, 13 ಮತ್ತು 15 ರಂದು, ಬೀದರ್-ಯಶವಂತಪುರ (16572) ಎಕ್ಸ್‌ಪ್ರೆಸ್ ರೈಲು ಮೇ 12, 13, 14 ಮತ್ತು 16 ರಂದು, ಯಶವಂತಪುರ-ಲಾತೂರ್ (16583) ಎಕ್ಸ್‌ಪ್ರೆಸ್ ರೈಲು ಮೇ 10, 14, 16 ಮತ್ತು 17 ರಂದು, ಲಾತೂರ್-ಯಶವಂತಪುರ (16584) ಎಕ್ಸ್‌ಪ್ರೆಸ್ ರೈಲು ಮೇ 11, 15, 17 ಮತ್ತು 18 ರಂದು, ಸೋಲಾಪುರ-ಹಾಸನ (11311) ಎಕ್ಸ್‌ಪ್ರೆಸ್ ರೈಲು ಮೇ 11 ರಿಂದ 16 ರವರೆಗೆ ಮತ್ತು ಹಾಸನ-ಸೋಲಾಪುರ (11312) ಎಕ್ಸ್‌ಪ್ರೆಸ್ ರೈಲುಗಳ ಸಂಚಾರವನ್ನು ಮೇ 12 ರಿಂದ 17 ರವರೆಗೆ ರದ್ದುಪಡಿಸಲಾಗಿದೆ.
ರೈಲು ನಿಯಂತ್ರಣ
- ಮೇ 4 ರಿಂದ 16 ರವರೆಗೆ ಲೋಕಮಾನ್ಯ ತಿಲಕ್ ಟರ್ಮಿನಸ್‌ನಿಂದ ಕೊಯಮತ್ತೂರಿಗೆ ಹೊರಡುವ ಲೋಕಮಾನ್ಯ ತಿಲಕ್ ಟರ್ಮಿನಸ್-ಕೊಯಮತ್ತೂರು ಎಕ್ಸ್‌ಪ್ರೆಸ್ (11013) ರೈಲು ಮಾರ್ಗ ಮಧ್ಯದಲ್ಲಿ ಸುಮಾರು 60 ನಿಮಿಷಗಳ ಕಾಲ, ಮೇ 4 ಮತ್ತು 11 ರಂದು ತುತಿಕೋರಿನ್‌ನಿಂದ ಓಖಾಗೆ ಪ್ರಯಾಣಿಸುವ ತುತಿಕೋರಿನ್-ಓಖಾ ವಿವೇಕ್ ಎಕ್ಸ್‌ಪ್ರೆಸ್ (19567) ರೈಲು ಸುಮಾರು 150 ನಿಮಿಷಗಳ ಕಾಲ ನಿಯಂತ್ರಣವಾಗುವ/ತಡವಾಗುವ ಸಾಧ್ಯತೆ ಇದೆ.
- ಮೈಸೂರಿನಿಂದ ಜೈಪುರಕ್ಕೆ ಸಂಚರಿಸುವ ಮೈಸೂರು-ಜೈಪುರ ಎಕ್ಸ್‌ಪ್ರೆಸ್ (12975) ರೈಲು ಮೇ 8, 10, 15 ಮತ್ತು 17 ರಂದು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ಮತ್ತು ಮೇ 9 ಮತ್ತು 16 ರಂದು ಪುರಿಯಿಂದ ಹೊರಡುವ ರೈಲು ಸಂಖ್ಯೆ 22883 ಪುರಿ-ಯಶವಂತಪುರ ಗರೀಬ್ ರಥ ಎಕ್ಸ್‌ಪ್ರೆಸ್ ರೈಲುಗಳು ಮಾರ್ಗ ಮಧ್ಯದಲ್ಲಿ 90 ನಿಮಿಷಗಳ ಕಾಲ ನಿಯಂತ್ರಣವಾಗುವ/ತಡವಾಗುವ ಸಾಧ್ಯತೆ ಇದೆ.


