ಮಂಗಳೂರು, : ನಾಪತ್ತೆಯಾಗಿದ್ದ ಮುಸ್ಲಿಂ ಯುವತಿ ಹಿಂದು ಯುವಕನ ಜತೆ ಮದುವೆಯಾಗಿ ಪತ್ತೆ ಆಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದಲ್ಲಿ ನಡೆದಿದೆ. ಪ್ರೀತಿಸಿ ಹಿಂದೂ ಸಂಪ್ರದಾಯದಂತೆ ಕೊತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಹರೀಶ್ ಗೌಡ-ಸುಹಾನಾ ವಿವಾಹವಾಗಿದ್ದಾರೆ. ಬಳಿಕ ಜೋಡಿ ಧರ್ಮಸ್ಥಳ ಪೊಲೀಸ್ ಠಾಣೆಗೆ ಬಂದಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಯುವಕ ಹರೀಶ್ ಗೌಡನನ್ನು ಪ್ರೀತಿಸಿ ಸುಹಾನಾ ಮದುಮೆ ಮಾಡಿಕೊಂಡಿದ್ದಾರೆ. ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಯುವತಿ ಹೇಳಿದ್ದಾಳೆ.
ಫೇಸ್ಬುಕ್ನಲ್ಲಿ ಪರಿಚಯವಾಗಿ ಪ್ರೀತಿ ಮಾಡಿದ್ದರು. ಬಳಿಕ ಕಂಪ್ಯೂಟರ್ ಕ್ಲಾಸ್ಗೆಂದು ಹೋಗಿದ್ದವಳು ನಾಪತ್ತೆ ಆಗಿದ್ದಳು. ಯುವತಿ ಮನೆಯವರು ಮೂಡಬಿದರೆ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು.