ಮೈಸೂರು: ಸುಮಾರು ಎರಡು ತಿಂಗಳು ಕಾಲ ಮೈಸೂರು ಜನರೊಂದಿಗೆ ಭಾವನಾತ್ಮಕವಾಗಿ ಬೆಸೆದು ಅತ್ಯಂತ ಯಶಸ್ವೀಯಾಗಿ ಜಂಬೂ ಸವಾರಿಯನ್ನು ಪೂರ್ತಿಗೊಳಿಸಿದ ಅಭಿಮನ್ಯು ನೇತೃತ್ವದ 14 ಆನೆಗಳ ಪಡೆ ಇಂದು ವಾಪಸ್ಸು ತಮ್ಮ ಕ್ಯಾಂಪ್ಗಳಿಗೆ ಹಿಂತಿರುಗುತ್ತಿದೆ. ಆನೆಗಳು ಮರಳಿ ಕಾಡಿಗೆ ಹೋಗುತ್ತಿರೋದು ಡಿಸಿಎಫ್ ಡಾ ಐಬಿ ಪ್ರಭುಗೌಡ ಅವರ ಹೃದಯವನ್ನು ಭಾರವಾಗಿಸಿದೆ. ಆನೆಗಳು ತಮ್ಮ ಶಿಬಿರಗಳಿಗೆ ಹೋದ ಬಳಿಕ ದಿನವಿಡೀ ಅಲ್ಲೇ ಇರುತ್ತಾವಾದರೂ ರಾತ್ರಿ ಸಮಯದಲ್ಲಿ ಮಾತ್ರ ಕಾಡಿಗೆ ಬಿಡಲಾಗುತ್ತದೆ ಎಂದು ಪ್ರಭುಗೌಡ ಹೇಳುತ್ತಾರೆ.