ಗುಡ್ಡ ಕುಸಿತ: ಸಂಚಾರಕ್ಕೆ ತೊಂದರೆ

ಯಲ್ಲಾಪುರ: ತಾಲೂಕಿನ ಇಡಗುಂದಿ ಗ್ರಾ.ಪಂ ವ್ಯಾಪ್ತಿಯ ಅರಬೈಲ್ ಸಮೀಪದ ಡಬ್ಗುಳಿ ಬಳಿ ರಸ್ತೆಯಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಮಳೆಗಾಲದಲ್ಲಿ ಡಬ್ಗುಳಿ ರಸ್ತೆಯ ಮೇಲೆ ಗುಡ್ಡ ಕುಸಿಯುತ್ತಿದೆ.

ಗುಡ್ಡದ ಮಣ್ಣು ಹಾಗೂ ಗಿಡಮರಗಳು ರಾಶಿ ರಾಶಿಯಾಗಿ ರಸ್ತೆಯಲ್ಲಿ ಬಂದು ಬಿದ್ದಿದ್ದವು. ಡಬ್ಗುಳಿ ಗ್ರಾಮಸ್ಥರಿಗೆ ಓಡಾಡಲು ಇರುವುದು ಇದೊಂದೇ ರಸ್ತೆಯಾಗಿರುವುದರಿಂದ ಓಡಾಟಕ್ಕೆ ತೊಂದರೆಯಾಗಿತ್ತು.
ನಂತರ ಗುತ್ತಿಗೆದಾರ ಆನಂದ ನಾಯ್ಕ ತಮ್ಮ ಜೆಸಿಬಿ ಮೂಲಕ ತಾತ್ಕಾಲಿಕವಾಗಿ ಮಣ್ಣು ತೆರವುಗೊಳಿಸಿ ಸಂಪರ್ಕ ಕಲ್ಪಿಸಿದರು.