ಕೇರಳ: ಮಾವುತನನ್ನು ಆನೆಯೊಂದು ಭೀಕರವಾಗಿ ತುಳಿದು ಸಾಯಿಸಿರುವ ಘಟನೆ ಕೇರಳದ ಇಡುಕ್ಕಿಯಲ್ಲಿ ಸಂಭವಿಸಿದೆ. ಜೂನ್ 20 ರಂದು ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾವುತನನ್ನೇ ಭೀಕರವಾಗಿ ಕೊಂದಿರುವುದು ಈ ವಿಡಿಯೋ ನಿಮ್ಮ ಎದೆಯಲ್ಲಿ ನಡುಕ ಹುಟ್ಟಿಸುವುದಂತೂ ಖಂಡಿತಾ. ದೇಹದ ಪ್ರತಿಯೊಂದು ಮೂಳೆಯು ಪುಡಿಯಾಗುವಂತೆ ಆನೆ ಮಾವುತನನ್ನು ತುಳಿದು ಬಿಸಾಕಿದೆ.
ಬಲಿಯಾದ ಮಾವುತ ನೀಲೇಶ್ವರಂನ 62 ವರ್ಷದ ಬಾಲಕೃಷ್ಣನ್ ಎಂದು ಗುರುತಿಸಲಾಗಿದ್ದು, ಅಡಿಮಲಿ ಸಮೀಪದ ಕಲ್ಲರ್‌ನಲ್ಲಿರುವ ಖಾಸಗಿ ಸಫಾರಿ ಕೇಂದ್ರವಾದ ಕೇರಳ ಫಾರ್ಮ್‌ನಲ್ಲಿ ಸಂಜೆ 6:30 ರ ಸುಮಾರಿಗೆ ಸಾವನ್ನಪ್ಪಿರುವುದಾಗಿ ವರದಿಯಾಗಿದೆ. ಆನೆ ದಾಳಿ ಮಾಡಿದಾಗ ಬಾಲಕೃಷ್ಣನ್ ಪ್ರವಾಸಿಗರನ್ನು ಸಫಾರಿಗೆ ಕರೆದೊಯ್ಯಲು ಕಾಯುತ್ತಿದ್ದ ಎಂದು ತಿಳಿದುಬಂದಿದೆ. ಪ್ರವಾಸಿಗರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದು, ಮರಣೋತ್ತರ ಪರೀಕ್ಷೆಯ ನಂತರ ಮಾವುತನ ಶವವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು.