ಹೋಳಿ ಸಂಭ್ರಮದ ವೇಳೆ ಚಲಿಸುವ ಸ್ಕೂಟರ್​ನಲ್ಲಿ ಹೆಣ್ಣು ಮಕ್ಕಳ ಪೋಲಿಯಾಟ; ಇಲ್ಲಿದೆ ವಿಡಿಯೊ

Holi 2024 : ಕೆಟ್ಟದಾಗಿ ನೃತ್ಯ ಮಾಡಿಕೊಂಡು ಸ್ಕೂಟರ್​ನಲ್ಲಿ ಹೋದ ಹುಡುಗಿಯರಿಗೆ ಪೊಲೀಸರು 33 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ.

ನವದೆಹಲಿ, ಮಾರ್ಚ್‌ 25 : ಹೋಳಿ ಹಬ್ಬವನ್ನು ಸೋಮವಾರ ದೇಶಾದ್ಯಂತ ಬಹಳ ಉತ್ಸಾಹದಿಂದ ಆಚರಿಸಲಾಗುತ್ತಿದೆ. ಜನರು ರಂಗಿನೋಕಳಿಯಲ್ಲಿ (Holi 2024) ಮುಳುಗಿದ್ದಾರೆ. ಏತನ್ಮಧ್ಯೆ ನೊಯ್ಡಾದಿಂದ ವೈರಲ್ ಆದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ, ಮೂವರು ಕುಳಿತಿದ್ದು ಅವರಲ್ಲಿ ಇಬ್ಬರು ಹುಡುಗಿಯರು ಹಾಗೂ ಒಬ್ಬ ಹುಡುಗ. ಆ ಇಬ್ಬರು ಹುಡುಗಿಯರು ಚಲಿಸುತ್ತಿರುವ ಸ್ಕೂಟರ್​ನಲ್ಲಿಯೇ ಪೋಲಿಯಾಟ ಆಡಿದ್ದಾರೆ. ಇದು ಜನರ ಆಕ್ರೋಶಕ್ಕೆ ಕಾರಣವಾಗುವ ಜತೆಗೆ ಪೊಲೀಸರ ಕೆಂಗಣ್ಣಿಗೂ ಗುರಿಯಾಗಿದ್ದು,ಬರೋಬ್ಬರಿ 33 ಸಾವಿರ ರೂಪಾಯಿ ದಂಡ ಜಡಿದಿದ್ದಾರೆ.

ನೋಯ್ಡಾದಲ್ಲಿ ಬಾಲಕ ಸ್ಕೂಟರ್ ಚಾಲನೆ ಮಾಡುತ್ತಿದ್ದರೆ, ಹುಡುಗಿಯರು ಚಲಿಸುತ್ತಿರುವ ಸ್ಕೂಟರ್​ನಲ್ಲಿ ಪರಸ್ಪರ ಎದುರು ಬದುರಾಗಿ ಕುಳಿತು ಅಶ್ಲೀಲ ನೃತ್ಯ ಮಾಡಿದ್ದಾರೆ. ಇನ್ನೊಬ್ಬ ವ್ಯಕ್ತಿ ವೀಡಿಯೊವನ್ನು ಚಿತ್ರೀಕರಿಸಿದ್ದಾನೆ, ಆದಾಗ್ಯೂ, ವೀಡಿಯೊವನ್ನು ಚಿತ್ರೀಕರಿಸಿದ ವ್ಯಕ್ತಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

“ಮೊಹೆ ರಂಗ್ ಲಗಾಡೆ” ನಲ್ಲಿ ಹಾಡಿಗೆ ಕೆಟ್ಟ ಡಾನ್ಸ್​
ವೈರಲ್ ಆಗಿರುವ ವೀಡಿಯೊದಲ್ಲಿ, ಇಬ್ಬರು ಹುಡುಗಿಯರು ಸ್ಕೂಟರ್​ನ ಹಿಂಭಾಗ ಕುಳಿತು ಬಾಲಿವುಡ್ ಹಾಡು “ಮೊಹೆ ರಂಗ್ ಲಗಾಡೆ” ಗೆ ನೃತ್ಯ ಮಾಡಿದ್ದಾರೆ. ಹುಡುಗಿಯರು ನೃತ್ಯ ಮಾಡುತ್ತಿದ್ದಾರೆಯೇ, ಅಶ್ಲೀಲ ಕೆಲಸದಲ್ಲಿ ತೊಡಗಿದ್ದಾರೆಯೇ ಅಥವಾ ಪ್ರಣಯದಲ್ಲಿ ತೊಡಗಿದ್ದಾರೆಯೇ ಎಂದು ವಿವರಿಸುವುದು ಅಸಾಧ್ಯ. ವಿಡಿಯೊ ನೋಡಿಯೇ ನಿರ್ಧಾರ ಮಾಡಬೇಕಾಗುತ್ತದೆ.

ಆದಾಗ್ಯೂ, ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೊವನ್ನು ನೋಡಿದ ನಂತರ ಆಕ್ರೋಶಗೊಂಡಿದ್ದಾರೆ. ವೈರಲ್ ವೀಡಿಯೊ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ನೋಯ್ಡಾದಿಂದ ಬಂದ ವಿಡಿಯೊ

ಈ ವಿಡಿಯೋ ಗ್ರೇಟರ್ ನೋಯ್ಡಾದಲ್ಲಿ ಮಾಡಲಾಗಿದೆ ಎಂದು ವರದಿಯಾಗಿದೆ. ಒಂದೆಡೆ, ಇಬ್ಬರು ಹುಡುಗಿಯರು ರೀಲ್ಸ್​ಗಾಗಿ ಅನುಚಿತ ಕ್ರಿಯೆಗಳಲ್ಲಿ ತೊಡಗಿದ್ದರೆ, ಮತ್ತೊಂದೆಡೆ, ಮೂವರು ಹೆಲ್ಮೆಟ್ ಇಲ್ಲದೆ ಸ್ಕೂಟರ್ ಸವಾರಿ ಮಾಡುತ್ತಿದ್ದಾರೆ. ಈ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದ್ದು, ಪೊಲೀಸರು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪೊಲೀಸರಿಂದ ದಂಡದ ಬಿಸಿ
ಈ ವಿಡಿಯೋ ವೈರಲ್ ಆದ ನಂತರ ನೋಯ್ಡಾ ಪೊಲೀಸರು 33,000 ರೂ.ಗಳ ದಂಡ ವಿಧಿಸಿದ್ದಾರೆ. ಪೊಲೀಸರು ಸಾಮಾಜಿಕ ಮಾಧ್ಯಮ ವೇದಿಕೆ ‘ಎಕ್ಸ್’ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನೋಯ್ಡಾ ಸಂಚಾರ ಪೊಲೀಸರು, ” ದೂರನ್ನು ಪರಿಗಣಿಸಿ, ನಿಯಮಗಳ ಪ್ರಕಾರ ಇ-ಚಲನ್ (33000 / -) ನೀಡಿದ್ದಾರೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಸಂಬಂಧಪಟ್ಟ ವಾಹನದ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ” ಎಂದು ಹೇಳಿದರು.