ಹಮಾಸ್ ಉಗ್ರರು ಎಷ್ಟು ಕ್ರೂರಿಗಳು ಎಂಬುದನ್ನು ಈ ವಿಡಿಯೋವನ್ನು ನೋಡಿದ್ರೆ ನಿಮ್ಗೆ ತಿಳಿಯಬಹುದು. ಇಸ್ರೇಲ್ ಒಂದು ಘನಘೋರ ವಿಡಿಯೋವನ್ನು ಬಿಡುಗಡೆ ಮಾಡಿದೆ. ಹಮಾಸ್ ಉಗ್ರನೊಬ್ಬ ಇಸ್ರೇಲ್ ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಂದಿರುವುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಅಕ್ಟೋಬರ್ 7ರಂದು ಹಮಾಸ್ ಉಗ್ರರು ಇಸ್ರೇಲ್ ಮೇಲೆ ರಾಕೆಟ್ ದಾಳಿ ಮಾಡಿದ್ದಾರೆ. ಇದರ ಜತೆಗೆ ಇಸ್ರೇಲ್ನ ಹೊರಂಗಣದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೆಯು ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಬಂದೂಕುಧಾರಿಯೊಬ್ಬ ಯುವತಿಯೊಬ್ಬನ್ನು ಅಟ್ಟಾಡಿಸಿಕೊಂಡು ಹೋಗಿ, ಗುಂಡಿಕ್ಕಿ ಕೊಂದಿದ್ದಾನೆ. ಇದೀಗ ಈ ವಿಡಿಯೋವನ್ನು ಇಸ್ರೇಲ್ ಬಿಡುಗಡೆ ಮಾಡಿದೆ
ಈ ವಿಡಿಯೋವನ್ನು ಎಕ್ಸ್ನಲ್ಲಿ ಇಸ್ರೇಲ್ ವಿದೇಶಾಂಗ ಸಚಿವಾಲಯ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವತಿಯೊಬ್ಬಳನ್ನು ಬಂದೂಕುಧಾರಿಯೊಬ್ಬ ಅಟ್ಟಾಡಿಸಿಕೊಂಡು ಬಂದಿದ್ದಾನೆ. ಈ ಸಮಯದಲ್ಲಿ ಯುವತಿ, ತೊಂದರೆ ಮಾಡದಂತೆ ಅಂಗಲಾಚಿದರು, ಕ್ರೂರಿ ಹಮಾಸ್ ಬಂದೂಕುಧಾರಿ ಆಕೆಯ ಮಾತನ್ನು ಕೇಳದೆ ಶೂಟ್ ಮಾಡಿದ್ದಾನೆ.
ಹಮಾಸ್ ಉಗ್ರರು ದಾಳಿ ಮಾಡುತ್ತಿದ್ದಂತೆ ಅಲ್ಲಿಂದ ಅನೇಕ ಜನರ ಓಡಲು ಶುರು ಮಾಡುತ್ತಾರೆ. ಈ ಸಮಯದಲ್ಲಿ ಈ ಯುವತಿ ಮಾತ್ರ ಹಮಾಸ್ ಕೈ ಸಿಲುಕಿಕೊಳ್ಳುತ್ತಾಳೆ. ಈ ವಿಡಿಯೋವನ್ನು ಹಂಚಿಕೊಂಡ ನಂತರ ಇಸ್ರೇಲ್ ಇದು ಹಮಾಸ್ ಮಾಡಿದ ಘೋರ ಅನ್ಯಾಯ, ಇದನ್ನು ಖಂಡಿತ ಕ್ಷಮಿಸಲು ಸಾಧ್ಯವಿಲ್ಲ ಎಂದು ಹೇಳಿದೆ. ಈ ದೃಶ್ಯ ಇಸ್ರೇಲ್ನ ಕಿಬ್ಬುಟ್ಜ್ ಅಲ್ಯುಮಿಮ್ ಬಳಿ, ರಸ್ತೆಯ ಲೇಔಟ್ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.