ಚಿಕಿತ್ಸೆ ಫಲಿಸದೆ ಜೈಲಿನಲ್ಲಿದ್ದ ಕೊಲೆ ಆರೋಪಿ ಸಾವು

ಚಿಕ್ಕಮಗಳೂರು: ಜೈಲಿನಲ್ಲಿದ್ದ ಕೊಲೆ ಆರೋಪಿ  ಕೆಂಚಪ್ಪ (49) ಚಿಕಿತ್ಸೆ ಫಲಿಸದೆ ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆರೋಪಿ ಕೆಂಚಪ್ಪ ಮೂರು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಕಡೂರು ಪಟ್ಟಣದಲ್ಲಿ ಮೊಬೈಲ್ ವಿಚಾರವಾಗಿ ಮಂಜುನಾಥ್ ಎಂಬುವುರನ್ನು ಹತ್ಯೆಗೈದಿರುವ ಆರೋಪದಡಿ ಕೆಂಚಪ್ಪ 5 ತಿಂಗಳಿನಿಂದ‌ ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದಲ್ಲಿದ್ದರು. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಅನಾರೋಗ್ಯವಿದ್ದರೂ ಸರಿಯಾದ ಸಮಯಕ್ಕೆ ಚಿಕಿತ್ಸೆ ನೀಡದ ಹಿನ್ನೆಲೆ ಕೆಂಚಪ್ಪ ಸಾವನ್ನಪ್ಪಿದ್ದಾರೆ ಎಂದು ಮೃತ ಕೆಂಚಪ್ಪ ಕುಟುಂಬಸ್ಥರು ಜೈಲು ಸಿಬ್ಬಂದಿ ಮೇಲೆ ಆರೋಪ ಮಾಡಿದ್ದಾರೆ.