ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಅನ್ಯಕೋಮಿನ ಗುಂಪಿನಿಂದ ಚಾಕು ಇರಿತ

ಚಿಕ್ಕಮಗಳೂರು: ಕ್ಷುಲ್ಲಕ ಕಾರಣಕ್ಕೆ ವಿಘ್ನೇಶ್ ಎಂಬ ಯುವಕನಿಗೆ ಅನ್ಯಕೋಮಿನ ಗುಂಪು ಚಾಕು  ಇರಿದು ಪರಾರಿಯಾಗಿರುವ ಘಟನೆ ಜಿಲ್ಲೆಯ ಕಡೂರಿನಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡ ವಿಘ್ನೇಶ್​​ನನ್ನು​​ ಕಡೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳು ವಿಘ್ನೇಶ್ ಕಡೂರು ಪಟ್ಟಣದ ಸಿಪಿಸಿ ಕಾಲೋನಿ ನಿವಾಸಿ ಎಂದು ತಿಳಿದುಬಂದಿದೆ. ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.