HSR Layout ಪೊಲೀಸ್‌ ಠಾಣೆಯಲ್ಲಿ ಹೀಗೊಂದು ಅಸಂಬದ್ಧ ಎಫ್‌ಐಆರ್! ಅಧಿಕಾರಿಗಳೇ ಹೈರಾಣು!

ಬೆಂಗಳೂರು (ಜು.2) : ‘ಆತ್ಮಹತ್ಯೆಗೆ ಕಾರಿನ ಲೈಟ್ ಒಡೆದು ಹಾಕಿದ್ದೇ ಕಾರಣ. ಮೃತದೇಹದ ಮೇಲೆ ಕ್ರಮ ಕೈಗೊಳ್ಳಿ’ ಹೀಗೊಂದು ಅಸಂಬದ್ಧ ಎಫ್‌ಐಆರ್‌ ಹೆಚ್‌ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಾಝಿಲಾ ಎಂಬಾಕೆ ಇಂಥ ಅಸಂಬದ್ಧ ದೂರು ನೀಡಿರುವ ಮಹಿಳೆ. ಮೃತ ದೇಹದ ಮೇಲೆ ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಉಲ್ಲೇಖಿಸಿರುವ ಮಹಿಳೆ. ದೂರುದಾರರು ಈ ರೀತಿ ದೂರು ಕೊಟ್ಟಿದ್ದಾರೆ .ಆದರೆ ಪೊಲೀಸರು ಇದನ್ನು ಗಮನಿಸದೇ ನಿರ್ಲಕ್ಷ್ಯದಿಂದ ದ ಎಫ್ಐಆರ್ ದಾಖಲಿಸಿಕೊಂಡಿರುವುದು ಸ್ಪಷ್ಟವಾಗಿದೆ.

ಫಜೀಲಾ ಎಂಬ ಮಹಿಳೆಯ ಮಗಳು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಆತ್ಮಹತ್ಯೆಗೆ  ಮನೆಯ ಸಮೀಪದ ರಾಮಕೃಷ್ಣ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನದ ಸಮಿತಿಯವರು ಕಾರಣವೆಂದು ದೂರು ನೀಡಿದ್ದಾಲೆ. ಮನೆಯೆದುರು ಇರುವ ದೇವಾಸ್ಥಾನದ ಧ್ವನಿವರ್ಧಕದಿಂದಾಗ ತೊಂದರೆಯಾಗುತ್ತಿದೆ. ಮಕ್ಕಳು ಫುಟ್ಬಾಲ್ ಆಡುವಾಗಲೂ ತೊಂದರೆ ಕಿರಿಕ್ ಮಾಡಿದ್ದಾರೆ. ಇಷ್ಟು ಸಾಲದೆಂಬಂತೆ ನಮ್ಮೊಂದಿಗೆ ಗಲಾಟೆ ಮಾಡಿ ಕಾರಿನ ಲೈಟ್ ಒಡೆದುಹಾಕಿದ್ದಾರೆ. ಇದರಿಂದ ಮನನೊಂದು ನಮ್ಮ ಮಗಳು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ. ಆದರೆ ದೂರಿನ ಕೊಲೆಯಲ್ಲಿ “ಮೃತದೇಹದ ವಿರುದ್ಧ ಕ್ರಮ ಕೈಗೊಳ್ಳಿ” ಎಂದಿದೆ. 

ಇದು ದೂರುದಾರಿಂದ ಟೈಪಿಂಗ್ ಮಿಸ್ಟೇಕ್ ಆಗಿದ್ದರೆ ಅದನ್ನ ರೈಟರ್ ಅಥವ ಎಸ್ ಹೆಚ್ ಒ ಆದರೂ ಎಫ್ ಐ ಆರ್ ನ್ನು ಪರಿಶೀಲನೆ ನಡೆಸಬೇಕಿತ್ತು. ಎಫ್ ಐ ಆರ್ ನ್ನು ಮೂರ್ನಾಲ್ಕು ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ . ಅದರೂ ಇಲ್ಲಿರುವ ತಪ್ಪು ಯಾರ ಗಮನಕ್ಕೆ ಬಂದಿಲ್ಲವೇ? ಎಂಬುದು ಪ್ರಶ್ನೆಯಾಗಿದೆ. ಒಂದು ಸಾವಿಗೆ ಏನಾದರೂ ಕಾರಣ ನೀಡಿ ಎಫ್ ಐ ಆರ್ ಮುಗಿಸಿ ಬಿಟ್ಟರೆ ಸಾಕು ಎನ್ನುವಷ್ಟರ ಮಟ್ಟಿಗೆ ಪೊಲೀಸರು ನಿರ್ಲಕ್ಷ್ಯ, ಹೊಣೆಗೇಡಿತನ ಎದ್ದು ಕಾಣುತ್ತಿದೆ.