ಬೀದರ್: ಬೀದರ್ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ವರು ದರೋಡೆಕೋರರನ್ನು ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷದ ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
10 ಬೈಕ್ 1 ಕಾರು ಹಾಗೂ ಬೆಳ್ಳಿಯ ಆಭರಣಗಳು ಸೇರಿದಂತೆ ಹಲವಾರು ವಸ್ತುಗಳನ್ನು ಬಂಧಿತರಿಂದ ವಶಪಡಿಸಿಕೊಳ್ಳಲಾಗಿದೆ. ಬಂಧಿತರೆಲ್ಲ ವಿವಿಧ ಪ್ರಕರಣದಲ್ಲಿ ಬೇಕಾಗಿದ್ದವರು ಎಂದು ತಿಳಿದು ಬಂದಿದೆ. ನಗರದಲ್ಲಿ ಹೆಚ್ಚುತ್ತಿದ್ದ ಕಳ್ಳತನವನ್ನು ಹತ್ತಿಕ್ಕಲು ಪೊಲೀಸರು ಹಲವು ದಿನಗಳಿಂದ ಬಂಧಿತ ಆರೋಪಿಗಳ ಮೇಲೆ ಕಣ್ಣಿಟ್ಟಿದ್ದರು ಎಂದು ತಿಳಿದು ಬಂದಿದೆ.
ಓರ್ವ ಆರೋಪಿಯಿಂದ 1 ಕಾರು ಹಾಗೂ 4 ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ. ಮತ್ತೊಬ್ಬನಿಂದ 6 ಬೈಕ್‍ಗಳನ್ನು ಜಪ್ತಿ ಮಾಡಲಾಗಿದೆ. ಒರ್ವ ಮನೆಗಳ್ಳನಿಂದ 18 ತೊಲೆ ಬೆಳ್ಳಿಯ ಆಭರಣಗಳು ಹಾಗೂ ಎರಡು ಟೈಲರಿಂಗ್ ಮಿಷನ್‍ಗಳನ್ನು ಜಪ್ತಿ ಮಾಡಲಾಗಿದೆ
ಎಸ್ಪಿ ಚೆನ್ನಬಸವಣ್ಣ ಲಂಗೋಟಿ ಮಾರ್ಗದರ್ಶನದಲ್ಲಿ ನ್ಯೂ ಟೌನ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಭಾಗಿಯಾದವರಿಗೆ ಗೌರವ ಧನ ನೀಡಿ ಅಭಿನಂದಿಸಿದ್ದಾರೆ