2ನೇ ಪತಿಗೂ ಡಿವೋರ್ಸ್ ಡಿವೋರ್ಸ್ ಕೊಟ್ರಾ ಚಿರಂಜೀವಿ ಪುತ್ರಿ ಶ್ರೀಜಾ? ವಾರಕ್ಕೊಮ್ಮೆ ಮಗಳ ಭೇಟಿ ಬಗ್ಗೆ ಕಲ್ಯಾಣ್ ದೇವ್ ಭಾವುಕ

ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ 2ನ ಪತಿಯಿಂದನೂ ವಿಚ್ಛೇದನ ಪಡೆದುಕೊಂಡ್ರಾ ಎನ್ನುವ ಅನುಮಾನ ಬಲವಾಗಿದೆ. ಇದಕ್ಕೆ ಕಾರಣ ಶ್ರೀಜಾ 2ನೇ ಪತಿ, ನಟ ಕಲ್ಯಾಣ್ ದೇವ್ ಹಂಚಿಕೊಂಡ ಭಾವುಕ ಪೋಸ್ಟ್. ಶ್ರೀಜಾ ಅವರ 2 ಮದುವೆಯೂ ಉಳಿಯಲಿಲ್ಲ. ಶ್ರೀಜಾ ಚಿಕ್ಕ ವಯಸ್ಸಿನಲ್ಲೇ ಸಿರೀಶ್ ಭಾರಧ್ವಜ್ ಎನ್ನುವವರನ್ನು ಪ್ರೀತಿಸಿ ಓಡಿ ಹೋಗಿ ಮದುವೆಯಾಗಿದ್ದರು. ಮನೆಯವರ ವಿರೋಧ ಕಟ್ಟಿಕೊಂಡು ಮದುವೆಯಾಗಿದ್ದರೂ ಆ ಸಂಬಧವನ್ನು ತುಂಬಾ ಉಳಿಸಿಕೊಳ್ಳುವಲ್ಲಿ ಶ್ರೀಜಾ ಸೋತರು. ಮೊದಲ ಪತಿಗೆ ವಿಚ್ಛೇದನ ನೀಡಿ ಮನೆಗೆ ಬಂದಿದ್ದ ಶ್ರೀಜಾ ಮತ್ತೆ 2ನೇ ಮದುವೆಯಾದರು. ಕಲ್ಯಾಣ್ ದೇವ್ ಜೊತೆ ಶ್ರೀಜಾ 2ನೇ ಬಾರಿ ದಾಂಪತ್ಯಕ್ಕೆ ಕಾಲಿಟ್ಟರು. ಆದರೆ 2ನೇ ಪತಿಯಿಂದನೂ ದೂರ ಆಗಿದ್ದರು. ಇದೀಗ ಕಲ್ಯಾಣ್ ದೇವ್ ಅವರಿಗೆ ವಿಚ್ಛೇದನ ನೀಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಇದಕ್ಕೆ ಕಾರಣ ಕಲ್ಯಾಣ್ ಶೇರ್ ಮಾಡಿರುವ ಪೋಸ್ಟ್ 

ನಟ ಕಲ್ಯಾಣ್ ದೇವ್ ಭಾವುಕ ಪೋಸ್ಟ್ ಹಂಚಿಕೊಂಡಿದ್ದಾರೆ. ಮಗಳ ಜೊತೆ ಕಾಲ ಕಳೆದ ವಿಡಿಯೋ ಶೇರ್ ಮಾಡಿ ಭಾವುಕರಾಗಿದ್ದಾರೆ. ವಾರಕ್ಕೆ 4 ಗಂಟೆ ಮಾತ್ರ ಮಗಳ ಜೊತೆ ಸಮಯ ಕಳೆಯಲು ಸಿಗುತ್ತೆ ಎಂದು ಹೇಳಿದ್ದಾರೆ. ಮತ್ತೊಂದು ವಿಡಿಯೋ ಶೇರ್ ಮಾಡಿ ‘ನಾವು ಮತ್ತೆ ಭೇಟಿಯಾಗುವವರೆಗೂ, ನಿನ್ನ ಈ ವಿಶೇಷ ನೆನಪುಗಳು ಯಾವಾಗಲೂ ನಗುವನ್ನು ತರುತ್ತವೆ. ಮಿಸ್ ಯು ನವ್ವು’ ಎಂದು ಬರೆದುಕೊಂಡಿದ್ದಾರೆ.

ಅಂದಹಾಗೆ ಕಲ್ಯಾಣ್ ದೇವ್ ಅಪ್ಪಂದಿರ ದಿನದ ವಿಶೇಷವಾಗಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕಲ್ಯಾಣ್ ಪೋಸ್ಟ್ ಗೆ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಇಬ್ಬರೂ ಡಿವೋರ್ಸ್ ಪಡೆದುಕೊಂಡ್ರಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇಬ್ಬರೂ ದೂರ ಆಗಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಎಲ್ಲಿಯೂ ಡಿವೋರ್ಸ್ ಬಗ್ಗೆ ಬಹಿರಂಗವಾಗಿರಲಿಲ್ಲ. ಆದರೀಗ ಕಲ್ಯಾಣ್ ಹಂಚಿಕೊಂಡ ಪೋಸ್ಟ್ ಇಬ್ಬರೂ ಡಿವೋರ್ಸ್ ಪಡೆದಿರುವುದು ಅಧಿಕೃತವಾಗಿದೆ ಎನ್ನುವ ಅನುಮಾನ ಮೂಡಿಸಿದೆ.

ಶ್ರೀಜಾ ಮತ್ತು ಕಲ್ಯಾಣ್ ದೇವ್ ಮಾರ್ಚ್ 28, 2016 ರಂದು ಅದ್ಧೂರಿಯಾಗಿ ವಿವಾಹವಾದರು. ಬೆಂಗಳೂರಿನಲ್ಲಿ ಇವರ  ವಿವಾಹ ಮಹೋತ್ಸವ ಜರುಗಿತ್ತು. ಕೆಲವು ವರ್ಷಗಳ ನಂತರ ಅವರ ಸಂಬಂಧವು ಹದಗೆಟ್ಟಿತು. ಮದುವೆ ಬಳಿಕ ಕಲ್ಯಾಣ್ ದೇವ್ ಸಿನಿಮಾರಂಗಕ್ಕೂ ಕಾಲಿಟ್ಟರು. ಹೀರೋ ಆಗಿ ಮಿಂಚಿದರು. ಆದರೆ ಕೆಲವು ಸಮಯದ ನಂತರ ಶ್ರೀಜಾ ತನ್ನ ಹೆಸರಿನಿಂದ ಪತಿಯ ಹೆಸರನ್ನು ಕೈಬಿಟ್ಟರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕಲ್ಯಾಣ್ ದೇವ್ ಜೊತೆಗಿನ ಎಲ್ಲಾ ಫೋಟೋವನ್ನು ಡಿಲೀಟ್ ಮಾಡಿ ಇಬ್ಬರೂ ಒಬ್ಬರಿಗೊಬ್ಬರು ಅನ್ ಫಾಲೋ ಮಾಡಿದರು. ಕಲ್ಯಾಣ್ ದೇವ್ ಮತ್ತು ಶ್ರೀಜಾ ದಾಂಪತ್ಯಕ್ಕೆ ಒಬ್ಬಳು ಮಗಳಿದ್ದಾಳೆ. ಮೊದಲ ಪತಿಯಿಂದನೂ ಶ್ರೀಜಾಗೆ ಒಬ್ಬಳು ಹೆಣ್ಣು ಮಗು. ಸದ್ಯ ಶ್ರೀಜಾ ಇಬ್ಬರೂ ಹೆಣ್ಣು ಮಕ್ಕಳ ತಾಯಿಯಾಗಿ ಅವರ ಆರೈಕೆ ಮಾಡುತ್ತಿದ್ದಾರೆ.