ರಸ್ತೆ ದಾಟುವಾಗ ಟ್ರಕ್​ ಡಿಕ್ಕಿ ಹೊಡೆದ ಪರಿಣಾಮ 3 ಆನೆಗಳು ಸ್ಥಳದಲ್ಲೇ ಸಾವು

ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮೂರು ಆನೆಗಳು ಸಾವನ್ನಪ್ಪಿವೆ. ಚಿತ್ತೂರು-ಪಲಮನೇರು ರಾಷ್ಟ್ರೀಯ ಹೆದ್ದಾರಿಯ ಜಗಮರ್ಲ ಕ್ರಾಸ್‌ನಲ್ಲಿ ಆನೆಗಳು ರಸ್ತೆ ದಾಟುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚಿತ್ತೂರು ಜಿಲ್ಲೆಯ ಪಲಮನೇರು ಮಂಡಲದಲ್ಲಿ ಈ ಅಪಘಾತ ಸಂಭವಿಸಿದೆ. ಮಾಹಿತಿ ಪಡೆದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ರಸ್ತೆ ದಾಟುತ್ತಿದ್ದಾಗ ಟ್ರಕ್ ಡಿಕ್ಕಿ ಹೊಡೆದ ನಂತರ ಮೂರು ಆನೆಗಳು ಸಾವನ್ನಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆನೆಗಳಿಗೆ ಡಿಕ್ಕಿ ಹೊಡೆದ ನಂತರ ಟ್ರಕ್ ಚಾಲಕ ತಲೆಮರೆಸಿಕೊಂಡಿದ್ದಾನೆ. ಟ್ರಕ್ ಚಾಲಕರು ಅತಿವೇಗದ ಚಾಲನೆಯಿಂದ ಇಂತಹ ಅವಘಡಗಳು ಸಂಭವಿಸುತ್ತಿವೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.