ಕಿರುತೆರೆಯ ಸಹಜ ಸುಂದರಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ ಅವರು ತಾಯಿಯಾಗುತ್ತಿರುವ ಸಂಭ್ರಮದಲ್ಲಿದ್ದಾರೆ. ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಈಗ ಬೇಬಿ ಶವರ್ ಕಾರ್ಯಕ್ರಮದಲ್ಲಿ ಮಿಂಚಿದ್ದಾರೆ. ಈ ಕುರಿತ ಪೋಸ್ಟ್ ಎಲ್ಲೆಡೆ ಸದ್ದು ಮಾಡುತ್ತಿದೆ.
‘ಮಧುಬಾಲ’ ಸೀರಿಯಲ್ ಮೂಲಕ ನಟನೆಗೆ ಎಂಟ್ರಿ ಕೊಟ್ಟ ನಟಿ ಅರ್ಚನಾ ಅವರು ಪುನೀತ್ ರಾಜ್‌ಕುಮಾರ್ ನಿರ್ಮಾಣದ ‘ಮನೆದೇವ್ರು’ ಸೀರಿಯಲ್ ನಾಯಕಿಯಾಗಿ ಮಿಂಚಿದ್ದರು. ಅದ್ಭುತ ನಟಿಯಾಗಿ ಗಮನ ಸೆಳೆದರು ಬಳಿಕ ಗುರುಹಿರಿಯರ ಸಮ್ಮುಖದ ಮೇರೆಗೆ ವಿಘ್ನೇಶ್ ಶರ್ಮಾ ಜೊತೆ ಹಸೆಮಣೆ ಏರಿದರು. ಈಗ ಫಾರಿನ್‌ನಲ್ಲಿ ಸೆಟಲ್ ಆಗಿದ್ದಾರೆ.
ಫ್ಲೋರಿಡಾದಲ್ಲಿ ನೆಲೆಸಿರುವ ನಟಿ ಅರ್ಚನಾ ಲಕ್ಷ್ಮೀನರಸಿಂಹಸ್ವಾಮಿ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈಗ ಅವರು ಪತಿ, ಸ್ನೇಹಿತರು, ಕುಟುಂಬದ ಜೊತೆಗೆ ಆಚರಿಸಿಕೊಂಡಿದ್ದಾರೆ. ಏನಿದು ಪಾರ್ಟಿ ಅಂತ ಕೆಲವರಿಗೆ ಸಂದೇಹ ಬಂದಿರಬಹುದು. ವಿದೇಶದಲ್ಲಿ ಮಗುವಿನ ಲಿಂಗವನ್ನು ಊಹಿಸುವ ಪಾರ್ಟಿ ಇದಾಗಿದೆ.
ವಿದೇಶಿಗರು ಇದೊಂದು ಫನ್ ಪಾರ್ಟಿ ಎನ್ನುವಂತೆ ಮಾಡಿಕೊಂಡಿದ್ದಾರೆ. ಬೇಬಿ ಶವರ್ ಮಾಡುತ್ತಾರೆ. ಆ ಸಂದರ್ಭದಲ್ಲಿ ಕುಟುಂಬಸ್ಥರು, ಆತ್ಮೀಯರನ್ನು ಆಹ್ವಾನಿಸುತ್ತಾರೆ. ಭಾರತದಲ್ಲಿ ಈ ರೀತಿ ಪಾರ್ಟಿ ಮಾಡಲು ಅವಕಾಶವೇ ಇಲ್ಲ. ಸದ್ಯ ಮನೆದೇವ್ರು ನಾಯಕಿ ಮೊದಲ ಮಗುವಿನ ಬರುವಿಕೆಯ ಸಂತಸದಲ್ಲಿದ್ದಾರೆ.