ಕೊರೊನಾ ಬಳಿಕ ಹೆಚ್ಚಾಗ್ತಿವೆ ‘ಹೃದಯಾಘಾತ’ ಕೇಸ್,ಚಿಕ್ಕವರನ್ನೇ ಕಾಡುತ್ತಿರುವುದ್ಯಾಕೆ? ಇಲ್ಲಿವೆ ಕಾರಣಗಳು

ಬೆಂಗಳೂರು,: ಉಂಡು ಮಲಗಿದವನು ಎದ್ದೇಳುತ್ತಾನೆ ಎನ್ನುವ ಭರವಸೆ ಇಲ್ಲ. ಕೆಲಸಕ್ಕೆ ಹೋದವರು ಮನೆಗೆ ವಾಪಸ್ ಆಗುತ್ತಾರೆ ಎನ್ನುವ ನಂಬಿಕೆಯೇ ಇಲ್ಲ. ಆರೋಗ್ಯವಂಥರೆ  ದಿಢೀರ್‌ ಸಾವಿನ ಮನೆ ಸೇರುತ್ತಿದ್ದಾರೆ. ಅದಕ್ಕೆ ಸಾಕ್ಷಿ ಸಾವಿರಾರು ಇದ್ರು, ಈ ಎರಡು ಸಾವುಗಳು ಇಡೀ ಕರುನಾಡನ್ನೇ ಕಂಗೆಡುವಂತೆ ಮಾಡಿವೆ. ವ್ಯಾಯಾಮ ಮಾಡದಿದರೂ ಹೃದಯಾಘಾತ ಆಗುತ್ತಿದೆ. ದೇಹವನ್ನ ಹೆಚ್ಚು ದಂಡಿಸಿದರೂ ಹಾರ್ಟ್‌ಅಟ್ಯಾಕ್‌ ವಕ್ಕರಿಸಿಕೊಳ್ಳುತ್ತಿದೆ. ಅದರಲ್ಲೂ ಯುವಕರು ಮಧ್ಯ ವಯಸ್ಕರನ್ನೇ ಕಾಡುತ್ತಿದೆ.

ಕೊರೊನಾ ಬಳಿಕ ಹೆಚ್ಚಾಗ್ತಿವೆ ‘ಹೃದಯಾಘಾತ’

ಅಭಿಮಾನಿಗಳ ಪಾಲಿಗೆ ದೇವರಾಗಿರೋ ನಟ ಪುನೀತ್‌ ಸಾವಿನ ಬಳಿಕ ಕರುನಾಡೇ ಕಂಬನಿ ಮಿಡಿದಿತ್ತು ನಿಜ.. ಅದರ ಜತೆ ಎಲ್ಲರೂ ಎಚ್ಚೆತ್ತುಕೊಂಡಿದ್ದರು. ಹೃದಯಾಘಾತದ ಬಗ್ಗೆ ಅರಿವು ಆರಂಭವಾಗಿತ್ತು. ಹೀಗಿರುವಾಗಲೇ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಕೂಡಾ ಹಾರ್ಟ್‌ಅಟ್ಯಾಕ್‌ಗೆ ಬಲಿಯಾಗಿರುವುದು ಎಲ್ಲರೂ ಶಾಕ್ ಆಗುವಂತೆ ಮಾಡಿದೆ. ಅಷ್ಟಕ್ಕೂ ದಿನನಿತ್ಯದ ಆಹಾರ, ಲೈಫ್‌ಸ್ಟೈಲ್‌ನಿಂದಲೇ ಹೃದಯಾಘಾತಗಳು ಹೆಚ್ಚಾಗುತ್ತಿವೆ ಎಂದು ವೈದ್ಯರು ಹೇಳುತ್ತಿದ್ದಾರೆ. ಅದರಲ್ಲೂ ಕೊರೊನಾ ಬಳಿಕ ಈ ಸಂಖ್ಯೆ ಹೆಚ್ಚಾಗಿದ್ದು, ಒತ್ತಡದ ಜೀವನ, ಡಯಟ್‌, ಕೆಲಸದ ಕಾರಣಕ್ಕೆ ಶೇಕಡಾ 22 ರಷ್ಟು ಹಾರ್ಟ್‌ಅಟ್ಯಾಕ್‌ ಕೇಸ್‌ ಹೆಚ್ಚಾಗಿವೆಯಂತೆ. 40 ವರ್ಷದವರಿಗೆ ಹೆಚ್ಚು ಹೃದಯಾಘಾತಗಳು ಕಂಡುಬರುತ್ತಿವೆ. ಧೂಮಪಾನ, ಮಧ್ಯಪಾನ, ವ್ಯಾಯಾಮ ಇಲ್ಲದೇ ಇರೋದೆ, ಜತೆಗೆ ಅತಿಯಾದ ವ್ಯಾಯಾಮದಿಂದಲೂ ದಿಢೀರ್‌ ಸಾವು ಸಂಭವಿಸುತ್ತಿವೆ. ಇತ್ತೀಚೆಗೆ ಮಹಿಳೆಯರನ್ನೂ ಶೇಕಡಾ 8 ರಷ್ಟು ಹೃದಯಾಘಾತ ಸಂಖ್ಯೆ ಹೆಚ್ಚಾಗಿದೆ. ಇನ್ನು ಆರೋಗ್ಯ ಉತ್ತಮವಾಗಿದ್ದರೂ ಈ ಹೃದಯಘಾತ ಆಗಲು ಕಾರಣಗಳೇನು ಎನ್ನುವುದನ್ನು ಖ್ಯಾತ ಕಾರ್ಡಿಯಾಲಿಜಿಸ್ಟ್ ಹೇಳಿರುವುದು ಈ ಕೆಳಗಿನಂತಿದೆ ನೋಡಿ.

  • ವಾಯುಮಾಲಿನ್ಯದ ಹೆಚ್ಚಳ
  • ಗುಣಮಟ್ಟದ ಆಹಾರ ಇಲ್ಲದಿರುವುದು
  • ಅತಿಯಾದ ವ್ಯಾಯಾಮ
  • ಮಹಿಳೆಯರಲ್ಲಿನ ಹಾರ್ಮೋನ್ ಹಿಂಬ್ಯಾಲೆನ್ಸ್‌
  • ಕಡಿಮೆ ನಿದ್ದೆ ಮಾಡುವುದು
  • ಹೆಚ್ಚು ಫಾಸ್ಟ್‌ಪುಡ್ ತಿನ್ನುವುದು
  • ಅತಿಯಾದ ತೂಕ, ಒತ್ತಡ
  • ಆರೋಗ್ಯವಾಗಿದ್ದರೈ ಹಲವರು ಹಾರ್ಟ್‌ಅಟ್ಯಾಕ್‌ಗೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಕಾರಣವೇ ವಾಯುಮಾಲಿನ್ಯದ ಹೆಚ್ಚಳ. ಜತೆಗೆ ಗುಣಮಟ್ಟದ ಆಹಾರ ಇಲ್ಲದಿರುವುದು. ಅಗತ್ಯಕ್ಕಿಂತಲೂ ಹೆಚ್ಚು ವ್ಯಾಯಾಮ ಮಾಡುವುದು, ಮಹಿಳೆಯರಲ್ಲಿನ ಹಾರ್ಮೋನ್ ಹಿಂಬ್ಯಾಲೆನ್ಸ್‌ ದಿಢೀರ್‌ ಹೃದಯಘಾತಕ್ಕೆ ಕಾರಣವಾಗಿದೆ. ಜತೆಗೆ ಕಡಿಮೆ ನಿದ್ದೆ ಮಾಡುವುದು, ಹೆಚ್ಚು ಫಾಸ್ಟ್‌ಪುಡ್ ತಿನ್ನುವುದು, ಅತಿಯಾದ ತೂಕ ಹಾಗೂ ಒತ್ತಡದ ಜೀವನ ಕೂಡಾ ಹಾರ್ಟ್‌ಅಟ್ಯಾಕ್‌ಗೆ ಕಾರಣವಾಗ್ತಿದೆಯಂತೆ.
  • ಇನ್ನು ಇತರೆ ದೇಶಗಳಿಗೆ ಹೋಲಿಸಿದ್ರೆ ಕೊರೊನಾ ಬಳಿಕ ದೇಶದಲ್ಲಿ ಹೃದಯಾಘಾತಗಳ ಸಂಖ್ಯೆ ಹೆಚ್ಚಾಗಿರುವುದು ಗೊತ್ತಾಗಿದೆ. ವಿಷಯ ಅಂದ್ರೆ ಪುರುಷರಿಗೆ ಎದೆನೋವು, ಬೆವರು, ಉಸಿರಾಟದ ತೊಂದರೆ ಅಂತಾ ಹೃದಯಾಘಾತದ ಲಕ್ಷಣ ಕಂಡ್ರೆ, ಮಹಿಳೆಯರಿಗೆ ಯಾವ ಲಕ್ಷಣ ಇಲ್ಲದೇ ಇದು ವಕ್ಕರಿಸುತ್ತಂತೆ.
  • ಸದ್ಯದ ಕಾಲಘಟ್ಟದಲ್ಲಿ ಹೃದಯ-ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ. ಹೃದಯದ ಆರೋಗ್ಯವನ್ನು ಸುಧಾರಿಸಲು ಗುಣಮಟ್ಟದ ಅಂದರೆ ವಿಟಮಿನ್​ ಒಳಗೊಂಡಿರುವ ಆಹಾರ, ನಿಯಮಿತ ವ್ಯಾಯಾಮ, ಚೆನ್ನಾಗಿ ನಿದ್ರೆ ಮತ್ತು ಒತ್ತಡವನ್ನು ತಪ್ಪಿಸುವಂತಹ ಜೀವನಶೈಲಿಯನ್ನು ಬದಲಾವಣೆ ಮಾಡಿಕೊಳ್ಳಬೇಕು.
  • ಅದೇನೇ ಇರಲಿ ಅಧುನಿಕ ಜೀವನ ಶೈಲಿ, ಒತ್ತಡದ ಕೆಲಸ ಸದ್ದಿಲ್ಲದೆ ಸಾವಿಗೆ ಕಾರಣವಾಗುತ್ತಿದೆ. ಹೀಗಾಗಿ ಜನ ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕಿದೆ.